ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ಕೀರ್ತನಕಾರರು : ಪುರಂದರದಾಸರು
ರಾಗ : ಮಾಯಾಮಾಳವ ಗೌಳ
ತಾಳ : ಆದಿ
ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ॥ಪ॥
ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದೆನೆ ॥೧॥
ಅಷ್ಟಕರ್ತೃಗಳೆಂಬೋ ಅಷ್ಟನವಧಾನ್ಯವ ತಂದು
ಕುಟ್ಟಿತಟ್ಟಿ ಕಜ್ಜಾಯ ಕರಿದೆನೆ ॥೨॥
ಕೀರ್ತನಕಾರರು : ಪುರಂದರದಾಸರು
ರಾಗ : ಮಾಯಾಮಾಳವ ಗೌಳ
ತಾಳ : ಆದಿ
ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ
ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ॥ಪ॥
ತನುವೆಂಬ ಕಲ್ಲಿನೊಳು ಮನವೆಂಬ ಧಾನ್ಯವ ತುಂಬಿ
ವನವನದು ನವಬೇಳೆ ಬೀಸಿದೆನೆ ॥೧॥
ಅಷ್ಟಕರ್ತೃಗಳೆಂಬೋ ಅಷ್ಟನವಧಾನ್ಯವ ತಂದು
ಕುಟ್ಟಿತಟ್ಟಿ ಕಜ್ಜಾಯ ಕರಿದೆನೆ ॥೨॥
ಅಷ್ಟಕರ್ಮಗಳೆಂಬೋ ಕಾಷ್ಠವನ್ನುರುಹಿ ನಾನು
ನಿಷ್ಥೆಯಿಂದಲಿ ಅನ್ನವ ಬಾಗಿದೆನೆ ॥೩॥
ನಿಷ್ಥೆಯಿಂದಲಿ ಅನ್ನವ ಬಾಗಿದೆನೆ ॥೩॥
ಅಷ್ಟರೊಳಗೆನ್ನ ಗಂಡ ಬಂದು ಅಡುವ ಮಡಿಕೆಯ ಒಡೆದು
ಮುಟ್ಟಿಮುರಿದು ಮೂಲೆಗೆ ಹಾಕಿದನೆ ॥೪॥
ಉಡುವ ಸೀರೆಯ ಸೆಳೆದು ಗಿಡದ ತೊಪ್ಪಲ ಸುತ್ತಿ
ತಿರುಗಿ ಬಾರದ್ಹಾಂಗೆ ಮಾಡಿದನೆ ॥೫॥
ತಿರುಗಿ ಬಾರದ್ಹಾಂಗೆ ಮಾಡಿದನೆ ॥೫॥
ಮಾಡಿದೆ ಒಗೆತನವ ನಂಬಿಕಿಲ್ಲದ ಸಂಸಾರವ ನೆಚ್ಚಿ
ಕೂಡಿದೆ ಪುರಂದರವಿಠಲನ್ನ ದಾಸರ ॥ ೬॥
ಕೂಡಿದೆ ಪುರಂದರವಿಠಲನ್ನ ದಾಸರ ॥ ೬॥
Labels: ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ, Ombhattu Bagilolu Onde Divige Hachchi, ಪುರಂದರದಾಸರು, Purandaradasaru
ನಿಮ್ಮ ಸೇವೆಗೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿಈ ಹಾಡಿನ ಅಥ೯ ತಿಳಿಸಿ..
ದಯಮಾಡಿ ಈ ಹಾಡಿನ ಅರ್ಥ ತಿಳೊಸುವಿರಾ.
ಪ್ರತ್ಯುತ್ತರಅಳಿಸಿ