ಅಂಬಿಗ ನಾ ನಿನ್ನ ನಂಬಿದೆ
ಕೀರ್ತನಕಾರರು : ಪುರಂದರದಾಸರು
ರಾಗ : ಶಂಕರಾಭರಣ
ತಾಳ : ಅಟ್ಟ
ಅಂಬಿಗ ನಾ ನಿನ್ನ ನಂಬಿದೆ ಜಗ
ದಂಬಾರಮಣ ನಿನ್ನ ನಂಬಿದೆ ||ಪ||
ತುಂಬಿದ ಹರಿಗೋಲಂಬಿಗ ಅದ
ಕೊಂಭತ್ತು ಛಿದ್ರ ನೋಡಂಬಿಗ
ಸಂಭ್ರಮದಿಂದ ನೀನಂಬಿಗ ಅದ
ರಿಂಬು ನೋಡಿ ನಡೆಸಂಬಿಗ ||೧||
ಹೊಳೆಯ ಭರವ ನೋಡಂಬಿಗ ಅದಕೆ
ಸೆಳವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ
ಸೆಳೆದುಕೊಂಡೊಯ್ಯೊ ನೀನಂಬಿಗ ||೨||
ಆರು ತೆರೆಯ ನೋಡಂಬಿಗ ಅದು
ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿ
ವಾರಿಸಿ ದಾಟಿಸೋ ಅಂಬಿಗ ||೩||
ಹೊತ್ತು ಹೋಯಿತು ನೋಡಂಬಿಗ ಅಲ್ಲಿ
ಮತ್ತೈವರೀರ್ವರು ಅಂಬಿಗ
ಒತ್ತಿನಡೆಸು ನೋಡಿ ಅಂಬಿಗ
ಎನ್ನ ಸತ್ಯಲೋಕಕ್ಕೆ ಒಯ್ಯೊ ಅಂಬಿಗ ||೪||
ಸತ್ವಪಥದೊಳಗೆ ಅಂಬಿಗ ಪರಾ
ಭಕ್ತಿ ಹುಟ್ಟನು ಹಾಕಿ ಅಂಬಿಗ
ಮುಕ್ತಿದಾಯಕ ನಮ್ಮ ಪುರಂದರವಿಠಲನ
ಮುಕ್ತಿ ಮಂಟಪಕೊಯ್ಯೋ ಅಂಬಿಗ ||೫||
Labels: ಅಂಬಿಗ ನಾ ನಿನ್ನ ನಂಬಿದೆ, Ambiga Na Ninna Nambide, ಪುರಂದರದಾಸರು, Purandaradasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ