ಮಾನವ ಜನ್ಮ ದೊಡ್ಡದು
ಕೀರ್ತನಕಾರರು : ಪುರಂದರದಾಸರು
ರಾಗ : ಪಂತುವರಾಳಿ
ತಾಳ : ಅಟ್ಟ
ಮಾನವ ಜನ್ಮ ದೊಡ್ಡದು ಇದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ||ಪ||
ಕಣ್ಣು ಕೈ ಕಾಲ್ಕಿವಿ ನಾಲಗೆ ಇರಲಿಕ್ಕೆ
ಮಣ್ಣುಮುಕ್ಕಿ ಮರಳಾಗುವರೆ
ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು
ಉಣ್ಣದೆ ಉಪವಾಸವಿರುವರೇನೋ ||೧||
ಕಾಲನವರು ಬಂದು ಕರಪಿಡೆದೆಳೆದಾಗ
ತಾಳು ತಾಳೆಂದರೆ ಕೇಳುವರೆ?
ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ ||೨||
ಏನು ಕಾರಣ ಯದುಪತಿಯನ್ನು ಮರೆತಿರಿ
ಧನ ಧಾನ್ಯ ಸತಿ ಸುತರಿವು ನಿತ್ಯವೆ?
ಇನ್ನಾದರು ಶ್ರೀ ಪುರಂದರವಿಠಲನ
ಚೆನ್ನಾಗಿ ಭಜಿಸಿ ನೀವು ಸುಖಿಯಾಗಿರಯ್ಯ ||೩||
Manava Janma Doddadu, ಮಾನವ ಜನ್ಮ ದೊಡ್ಡದು, ಪುರಂದರದಾಸರು, Purandaradasaru
ಮಾನವ ಜನ್ಮವೆಂಬುದು ಅದೆಷ್ಟು ವಿಶೇಷತೆಗಳನ್ನೊಳಗೊಂಡಿದೆ, ಸಿಕ್ಕ ಈ ಜನ್ಮವನ್ನು ಸಾರ್ಥಕತೆಯೊಂದಿಗೆ ಪಂಚಭೂತಗಳಲ್ಲಿ ನಮ್ಮ ದೇಹ ಲೀನವಾದರೆ ಅದಕ್ಕಿಂತ ಮಿಗಿಲಿನ್ನೇನು ಎಂಬುದೇ ಪುರಂದರದಾಸರ ಈ ಸಾಲುಗಳು ನನ್ನ ಮನಹೊಕ್ಕಿತು. ನಿಜವಾಗಲು ದಾಸರ ಒಳಗಣ್ಣಿನ ನೋಟಗಳು ಅದ್ಭುತವೇ..
ಪ್ರತ್ಯುತ್ತರಅಳಿಸಿಮಾನವ ಜನ್ಮವೆಂಬುದು ಅದೆಷ್ಟು ವಿಶೇಷತೆಗಳನ್ನೊಳಗೊಂಡಿದೆ, ಸಿಕ್ಕ ಈ ಜನ್ಮವನ್ನು ಸಾರ್ಥಕತೆಯೊಂದಿಗೆ ಪಂಚಭೂತಗಳಲ್ಲಿ ನಮ್ಮ ದೇಹ ಲೀನವಾದರೆ ಅದಕ್ಕಿಂತ ಮಿಗಿಲಿನ್ನೇನು ಎಂಬುದೇ ಪುರಂದರದಾಸರ ಈ ಸಾಲುಗಳು ನನ್ನ ಮನಹೊಕ್ಕಿತು. ನಿಜವಾಗಲು ದಾಸರ ಒಳಗಣ್ಣಿನ ನೋಟಗಳು ಅದ್ಭುತವೇ..
ಪ್ರತ್ಯುತ್ತರಅಳಿಸಿ