ಈಸಬೇಕು ಇದ್ದು ಜಯಿಸಬೇಕು
ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಆದಿ
ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ ||ಪ||
ತಾಮರಸ ಜಲದ೦ತೆ
ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ ||೧||
ಗೇರು ಹಣ್ಣಿನಲ್ಲಿ ಬೀಜ
ಸೇರಿದ೦ತೆ ಸ೦ಸಾರದಿ
ಮೀರೀ ಆಸೆ ಮಾಡದಂತೆ
ಧೀರ ಕೃಷ್ಣನ ಭಕುತರೆಲ್ಲ ||೨||
ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಟ್ಟ ಪರಿಯಂತೆ
ಮೋಸ ಹೋಗದ್ಹಾ೦ಗೆ ಜಗ-
ದೀಶ ಪುರಂದರವಿಠಲನ ನೆನೆದು ||೩||
Labels: ಈಸಬೇಕು ಇದ್ದು ಜಯಿಸಬೇಕು, Isabeku Iddu Jayisabeku, ಪುರಂದರದಾಸರು, Purandaradasaru
ಕೀರ್ತನಕಾರರು : ಪುರಂದರದಾಸರು
ರಾಗ : ಧನ್ಯಾಸಿ
ತಾಳ : ಆದಿ
ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ ||ಪ||
ತಾಮರಸ ಜಲದ೦ತೆ
ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ ||೧||
ಗೇರು ಹಣ್ಣಿನಲ್ಲಿ ಬೀಜ
ಸೇರಿದ೦ತೆ ಸ೦ಸಾರದಿ
ಮೀರೀ ಆಸೆ ಮಾಡದಂತೆ
ಧೀರ ಕೃಷ್ಣನ ಭಕುತರೆಲ್ಲ ||೨||
ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಟ್ಟ ಪರಿಯಂತೆ
ಮೋಸ ಹೋಗದ್ಹಾ೦ಗೆ ಜಗ-
ದೀಶ ಪುರಂದರವಿಠಲನ ನೆನೆದು ||೩||
Labels: ಈಸಬೇಕು ಇದ್ದು ಜಯಿಸಬೇಕು, Isabeku Iddu Jayisabeku, ಪುರಂದರದಾಸರು, Purandaradasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ