ಇಷ್ಟು ದಯವುಳ್ಳವನ
ಕೀರ್ತನಕಾರರು : ವಾದಿರಾಜರು
ರಾಗ : ಕಲ್ಯಾಣಿ
ತಾಳ : ಆದಿ
ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ
ಎಷ್ಟು ನಿರ್ದಯಳೆ ನೀನು ||ಪ||
ಮುಟ್ಟುಕೋಪವ ದೂರಬಿಟ್ಟು ಸಂತೋಷದಲಿ
ಕೃಷ್ಣನ ಬಳಿಗೆ ಬಾರೆ ||ಅ.ಪ||
ನಿನ್ನಲ್ಲಿ ಭೋಗಲೋಲತೆ ಇಲ್ಲದಿದ್ದರೆ ನಿನಗೆ ಪೂಮಾಲೆಯ ಕೊಡುವನೆ
ಸಣ್ಣ ಕಮಲದಲೈದು ಬಣ್ಣಗಿಳಿಗಳ ಬರೆದ ಸಣ್ಣ ಸೀರೆಯ ಕೊಡುವನೆ
ಕಣ್ಣಿಗೆ ಬೇಕಾದ ಕನಕಮಯ ಕರೆದು ಕೈಯಲಿ ಕೊಡುವನೆ
ಬಿನ್ನಾಣವಾಡುತಲಿ ಬಗೆಬಗೆಯ ಮಾತಿನಲಿ ಬಾಯಿಮುದ್ದನೆ ಕೊಡುವನೆ ಓ ಸಖಿಯೆ ||೧||
ಕಳಿಯಡಿಕೆ ಅಲಗು ಕರ್ಪೂರ ಕಾಚನ ಗುಳಿಗೆ ಕರೆದು ಕೈಯಲಿ ಕೊಡುವನೆ
ಬೆಳದಿಂಗಳಲ್ಲಿ ಶೋಭಿಸುವ ಹೊಂಬಣ್ಣದ ಬಿಳಿಯೆಲೆಯ ನಿನಗೀವನೆ
ತಳಿತ ಮಾವಿನ ಚಿಗುರು ಇರುವ ರುಮಾಲೆಯ ತಲೆಯಲ್ಲಿ ಕಟ್ಟಿ ಬರುವನೆ
ಥಳಿಥಳಿಪ ನವಿಲಗರಿ ಮುತ್ತಿನ ತುರಾಯಿಯಿಟ್ಟು ತರುಣಿ ನಿನ್ನಲಿ ಬರುವನೆ ಓ ಸಖಿಯೆ ||೨||
ಉರುಟಾಣಿ ಮುತ್ತು ಸರ ಉಚಿತವಾಗಿತ್ತು ನಿನ್ನ ಉರುಟು ಕುಚಗಳ ಪಿಡಿವನೆ
ಕಿರುನಗೆಯ ನಗುತಲಿ ಸರಸವಾಡುತ ನಿನ್ನ ಸೆರಗ ಪಿಡಿದು ಸೆಳೆವನೆ
ಕರಕಮಲದಿಂದಲಿ ಕಿರುಬೆವರು ಒರಸುತ ಕಸ್ತೂರಿಯ ಬೊಟ್ಟಿಡುವನೆ
ಸಿರಿಯರಸ ಹಯವದನ ಕೃಷ್ಣನ ಚರಣಕ್ಕೆ ಶರಣಿಪೊಕ್ಕಿನ್ನು ಸುಖಿಸೆ ಓ ಸಖಿಯೆ ||೩||
Labels: ಇಷ್ಟು ದಯವುಳ್ಳವನ ಯಾಕೆ ಬರಬೇಡಂದಿ, Ishtu Dayavullavana Yake Barabedendi, ವಾದಿರಜರು, Vadirajaru

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ