ದಯಮಾಡು ದಯಮಾಡು ಎನ್ನ ಮೇಲೆ
ಕೀರ್ತನಕಾರರು : ವಿಜಯದಾಸರು
ರಾಗ : ಪಾಡಿ
ತಾಳ : ಝಂಪೆ
ದಯಮಾಡು ದಯಮಾಡು ಎನ್ನ ಮೇಲೆ
ಅಂತರಂಗದೊಳಿಪ್ಪ ಅಚ್ಯುತ ಮೂರ್ತಿ ।।ಪ।।
ಗಂಧ ಪರಿಮಳ ಕುಸುಮ ಜಾತಿ ಮಲ್ಲಿಗೆ ಮಾಲೆ
ಮಂದಾರ ಹಾರ ಕೊರಳೊಳಿಡಲೂ
ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ
ಹಂದಿಯಂದದಿ ಇಲ್ಲಿ ಇಪ್ಪ ನರಗೆ ।।೧।।
ಹೆತ್ತತುಪ್ಪ ಸಣ್ಣಶಾವಿಗೆ ಪರಮಾನ್ನ
ಹೆತ್ತತಾಯಿ ತಂದು ಉಣ್ಣಬಡಿಸಲು
ಅತ್ತ ಮೊಗವಗಚಿ ತೊಟ್ಟು ಉಣಬಡಿಸಿದ
ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ ।।೨।।
ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು
ಅಂಬಿಗ ತಡೆಯದೆ ದಾಟಿಸಲು
ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ
ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ ।।೩।।
Labels: ದಯಮಾಡು ದಯಮಾಡು ಎನ್ನ ಮೇಲೆ, Dayamadu Dayamadu Enna Mele, ವಿಜಯದಾಸರು, Vijayadasaru
ಕೀರ್ತನಕಾರರು : ವಿಜಯದಾಸರು
ರಾಗ : ಪಾಡಿ
ತಾಳ : ಝಂಪೆ
ದಯಮಾಡು ದಯಮಾಡು ಎನ್ನ ಮೇಲೆ
ಅಂತರಂಗದೊಳಿಪ್ಪ ಅಚ್ಯುತ ಮೂರ್ತಿ ।।ಪ।।
ಗಂಧ ಪರಿಮಳ ಕುಸುಮ ಜಾತಿ ಮಲ್ಲಿಗೆ ಮಾಲೆ
ಮಂದಾರ ಹಾರ ಕೊರಳೊಳಿಡಲೂ
ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ
ಹಂದಿಯಂದದಿ ಇಲ್ಲಿ ಇಪ್ಪ ನರಗೆ ।।೧।।
ಹೆತ್ತತುಪ್ಪ ಸಣ್ಣಶಾವಿಗೆ ಪರಮಾನ್ನ
ಹೆತ್ತತಾಯಿ ತಂದು ಉಣ್ಣಬಡಿಸಲು
ಅತ್ತ ಮೊಗವಗಚಿ ತೊಟ್ಟು ಉಣಬಡಿಸಿದ
ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ ।।೨।।
ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು
ಅಂಬಿಗ ತಡೆಯದೆ ದಾಟಿಸಲು
ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ
ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ ।।೩।।
Labels: ದಯಮಾಡು ದಯಮಾಡು ಎನ್ನ ಮೇಲೆ, Dayamadu Dayamadu Enna Mele, ವಿಜಯದಾಸರು, Vijayadasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ