ನಿನ್ನ ನಂಬಿದೆ ನಾನು
ಕೀರ್ತನಕಾರರು : ನೆಕ್ಕರ ಕೃಷ್ಣದಾಸರು
ರಾಗ : ಮುಖಾರಿ
ತಾಳ : ಆದಿ
ನಿನ್ನ ನಂಬಿದೆ ನಾನು ಎನ್ನ ನೀ ಸಲಹೋ
ಪನ್ನಗಶಯನ ಹರಿ ವೇಂಕಟರಮಣ ।।ಪ।।
ವರಧೃವನ ಪೊರೆದಂತೆ ಪ್ರಹ್ಲಾದಗೊಲಿದಂತೆ
ಕರಿಯ ಸಲಹಿದಂತೆ ಕರುಣವಿರಲಂತೆ ।।೧।।
ತರಲೆ ದ್ರೌಪದಿಯ ಅಭಿಮಾನ ಕಾಯ್ದಂತೆ
ಧುರದೊಳು ನರನ ಶಿರವ ಉಳುಹಿದಂತೆ ।।೨।।
ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ
ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ ।।೩।।
ಪರಮ ಮಂಗಳಮೂರ್ತಿ ಪಾವನ ಕೀರ್ತಿ
ಧರೆಯ ರಕ್ಷಿಪ ಆರತಿ ದಯವಾಗು ಪೂರ್ತಿ ।।೪।।
ಮಕರಕುಂಡಲಧರ ಮಕುಟ ಕೇಯೂರ
ಸಕಲಾಭಾರಣ ಹಾರ ಸ್ವಾಮಿ ಉದಾರ ।।೫।।
ತಾಳಲಾರೆನು ನಾನು ಬಹಳ ದಾರಿದ್ರ್ಯ
ಕೇಳುವರಿಲ್ಲ ಬಹು ಭವಭಯ ಕ್ಷುದ್ರ ।।೬।।
ನೋಡಬೇಡೆನ್ನವಗುಣವ ದಮ್ಮಯ್ಯ
ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ ।।೭।।
ಭಕ್ತಜನ ಸಂಸಾರಿ ಬಹುದುರಿತಹಾರಿ
ಮುಕ್ತಿದಾಯಕ ದಾರಿ ಮುಂದೆ ನೀ ತೋರಿ ।।೮।।
ವರಾಹ ತಿಮ್ಮಪ್ಪ ಒಲವಾಗೆನ್ನಪ್ಪ
ಸಾರಿದವರ ತಪ್ಪು ಸಲಹೊ ನೀನಪ್ಪ ।।೯।।
Labels: ನಿನ್ನ ನಂಬಿದೆ ನಾನು, Ninna Nambide Naanu, ನೆಕ್ಕರ ಕೃಷ್ಣದಾಸರು, Nekkara Krishnadasaru
ಕೀರ್ತನಕಾರರು : ನೆಕ್ಕರ ಕೃಷ್ಣದಾಸರು
ರಾಗ : ಮುಖಾರಿ
ತಾಳ : ಆದಿ
ನಿನ್ನ ನಂಬಿದೆ ನಾನು ಎನ್ನ ನೀ ಸಲಹೋ
ಪನ್ನಗಶಯನ ಹರಿ ವೇಂಕಟರಮಣ ।।ಪ।।
ವರಧೃವನ ಪೊರೆದಂತೆ ಪ್ರಹ್ಲಾದಗೊಲಿದಂತೆ
ಕರಿಯ ಸಲಹಿದಂತೆ ಕರುಣವಿರಲಂತೆ ।।೧।।
ತರಲೆ ದ್ರೌಪದಿಯ ಅಭಿಮಾನ ಕಾಯ್ದಂತೆ
ಧುರದೊಳು ನರನ ಶಿರವ ಉಳುಹಿದಂತೆ ।।೨।।
ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ
ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ ।।೩।।
ಪರಮ ಮಂಗಳಮೂರ್ತಿ ಪಾವನ ಕೀರ್ತಿ
ಧರೆಯ ರಕ್ಷಿಪ ಆರತಿ ದಯವಾಗು ಪೂರ್ತಿ ।।೪।।
ಮಕರಕುಂಡಲಧರ ಮಕುಟ ಕೇಯೂರ
ಸಕಲಾಭಾರಣ ಹಾರ ಸ್ವಾಮಿ ಉದಾರ ।।೫।।
ತಾಳಲಾರೆನು ನಾನು ಬಹಳ ದಾರಿದ್ರ್ಯ
ಕೇಳುವರಿಲ್ಲ ಬಹು ಭವಭಯ ಕ್ಷುದ್ರ ।।೬।।
ನೋಡಬೇಡೆನ್ನವಗುಣವ ದಮ್ಮಯ್ಯ
ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ ।।೭।।
ಭಕ್ತಜನ ಸಂಸಾರಿ ಬಹುದುರಿತಹಾರಿ
ಮುಕ್ತಿದಾಯಕ ದಾರಿ ಮುಂದೆ ನೀ ತೋರಿ ।।೮।।
ವರಾಹ ತಿಮ್ಮಪ್ಪ ಒಲವಾಗೆನ್ನಪ್ಪ
ಸಾರಿದವರ ತಪ್ಪು ಸಲಹೊ ನೀನಪ್ಪ ।।೯।।
Labels: ನಿನ್ನ ನಂಬಿದೆ ನಾನು, Ninna Nambide Naanu, ನೆಕ್ಕರ ಕೃಷ್ಣದಾಸರು, Nekkara Krishnadasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ