ಕೊಂಬು ಕೊಳಲನೂದುತ್ತ
ಕೀರ್ತನಕಾರರು : ಶ್ರೀಪಾದರಾಜರು
ರಾಗ : ಮಾಯಾಮಾಳವಗೌಳ
ತಾಳ : ಅಟ್ಟ
ಕೊಂಬು ಕೊಳಲನೂದುತ್ತ ನಂಬಿಸಿ ಪೋದೆನೆಯವ್ವಾ
ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ।।ಪ।।
ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ
ಬೆಡಗುಗಾರನ ಕೊಡೆ ನುಡಿ ತೆರಳಿತ್ತೆಯವ್ವಾ ।।೧।।
ಮಾತು ಮನಸು ಬಾರದವಾ ಸೋತೆವವ್ವಾ ಕೃಷ್ಣಗಾಗಿ
ಆತನ ಕಾಣದೆ ಮನ ಕಾತರಿಸುತಿದೆಯವ್ವಾ ।।೨।।
ಅನ್ನೋದಕ ಒಳ್ಳೆವವಾ ಕಣ್ಣಿಗೆ ನಿದ್ರೆ ಬಾರದು
ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ ।।೩।।
ಮನೆಮನೆ ವಾರುತೆಗೆ ಮನವೆಳಸದೆಯವ್ವಾ
ಮನಸಿಜಪಿತನೊಡನೆ ಮನ ತೆರಳಿತೆಯವ್ವಾ ।।೪।।
ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ
ಗೋಪ ಜನರ ಕೂಡಿದ ಶ್ರೀಪತಿ ರಂಗವಿಠಲಾ ।।೫।।
Labels: ಕೊಂಬು ಕೊಳಲನೂದುತ್ತ , Kombu Kolalanoodutta, ಶ್ರೀಪಾದರಾಜರು, Sripadarajaru
ಕೀರ್ತನಕಾರರು : ಶ್ರೀಪಾದರಾಜರು
ರಾಗ : ಮಾಯಾಮಾಳವಗೌಳ
ತಾಳ : ಅಟ್ಟ
ಕೊಂಬು ಕೊಳಲನೂದುತ್ತ ನಂಬಿಸಿ ಪೋದೆನೆಯವ್ವಾ
ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ।।ಪ।।
ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ
ಬೆಡಗುಗಾರನ ಕೊಡೆ ನುಡಿ ತೆರಳಿತ್ತೆಯವ್ವಾ ।।೧।।
ಮಾತು ಮನಸು ಬಾರದವಾ ಸೋತೆವವ್ವಾ ಕೃಷ್ಣಗಾಗಿ
ಆತನ ಕಾಣದೆ ಮನ ಕಾತರಿಸುತಿದೆಯವ್ವಾ ।।೨।।
ಅನ್ನೋದಕ ಒಳ್ಳೆವವಾ ಕಣ್ಣಿಗೆ ನಿದ್ರೆ ಬಾರದು
ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ ।।೩।।
ಮನೆಮನೆ ವಾರುತೆಗೆ ಮನವೆಳಸದೆಯವ್ವಾ
ಮನಸಿಜಪಿತನೊಡನೆ ಮನ ತೆರಳಿತೆಯವ್ವಾ ।।೪।।
ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ
ಗೋಪ ಜನರ ಕೂಡಿದ ಶ್ರೀಪತಿ ರಂಗವಿಠಲಾ ।।೫।।
Labels: ಕೊಂಬು ಕೊಳಲನೂದುತ್ತ , Kombu Kolalanoodutta, ಶ್ರೀಪಾದರಾಜರು, Sripadarajaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ