ಕೊಡುವವನು ನೀನು ಕೊಂಬುವನು ನಾನು
ಕೀರ್ತನಕಾರರು : ವಿಜಯದಾಸರು
ರಾಗ : ಕಾಂಬೋದಿ
ತಾಳ : ಝಂಪೆ
ಕೊಡುವವನು ನೀನು ಕೊಂಬುವನು ನಾನು
ಬಡಮನದ ಮನುಜನ ಬೇಡಿ ಫಲವೇನು ।।ಪ।।
ಹದಿನಾರು ಹಲ್ಲುಗಳ ಬಾಯ್ದೆರೆದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು
ಮದನಕೇಳಿಗೆ ನೂರನೊಂದಾಗಿ ನೋಡುವನು
ಮದಡ ಮಾನವನೇನು ಕೊಡಬಲ್ಲ ಹರಿಯೆ ।।೧।।
ಗತಿಯಿಲ್ಲವೆಂತೆಂದು ನಾನಾ ಪ್ರಕಾರದಲ್ಲಿ
ಮತಿಗೆಟ್ಟು ಪೊಗಳಿದರೆ ತನ್ನ
ಸತಿ-ಸುತರ ಕೇಳಬೇಕೆಂದು ಮೊಗತಿರುಹುವ
ಅತಿದುರುಳ ಮತ್ತೇನು ಕೊಡಬಲ್ಲ ಹರಿಯೆ ।।೨।।
ಹೀನವೃತ್ತಿಯ ಜನರಿಗಾಸೆಯನು ಬಡುವುದು
ಗಾಣದೆತ್ತು ತಿರುಗಿ ಬಳಲಿದಂತೆ
ಭಾನುಕೋಟಿತೇಜ ವಿಜಯವಿಠಲರೇಯ
ನೀನಲ್ಲದನ್ಯತ್ರ ಕೊಡುಕೊಂಬರುಂಟೇ ।।೩।।
Labels: ಕೊಡುವವನು ನೀನು ಕೊಂಬುವನು ನಾನು, Koduvavanu Neenu Kombuvanu Naanu, ವಿಜಯದಾಸರು, Vijayadasaru
ಕೀರ್ತನಕಾರರು : ವಿಜಯದಾಸರು
ರಾಗ : ಕಾಂಬೋದಿ
ತಾಳ : ಝಂಪೆ
ಕೊಡುವವನು ನೀನು ಕೊಂಬುವನು ನಾನು
ಬಡಮನದ ಮನುಜನ ಬೇಡಿ ಫಲವೇನು ।।ಪ।।
ಹದಿನಾರು ಹಲ್ಲುಗಳ ಬಾಯ್ದೆರೆದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು
ಮದನಕೇಳಿಗೆ ನೂರನೊಂದಾಗಿ ನೋಡುವನು
ಮದಡ ಮಾನವನೇನು ಕೊಡಬಲ್ಲ ಹರಿಯೆ ।।೧।।
ಗತಿಯಿಲ್ಲವೆಂತೆಂದು ನಾನಾ ಪ್ರಕಾರದಲ್ಲಿ
ಮತಿಗೆಟ್ಟು ಪೊಗಳಿದರೆ ತನ್ನ
ಸತಿ-ಸುತರ ಕೇಳಬೇಕೆಂದು ಮೊಗತಿರುಹುವ
ಅತಿದುರುಳ ಮತ್ತೇನು ಕೊಡಬಲ್ಲ ಹರಿಯೆ ।।೨।।
ಹೀನವೃತ್ತಿಯ ಜನರಿಗಾಸೆಯನು ಬಡುವುದು
ಗಾಣದೆತ್ತು ತಿರುಗಿ ಬಳಲಿದಂತೆ
ಭಾನುಕೋಟಿತೇಜ ವಿಜಯವಿಠಲರೇಯ
ನೀನಲ್ಲದನ್ಯತ್ರ ಕೊಡುಕೊಂಬರುಂಟೇ ।।೩।।
Labels: ಕೊಡುವವನು ನೀನು ಕೊಂಬುವನು ನಾನು, Koduvavanu Neenu Kombuvanu Naanu, ವಿಜಯದಾಸರು, Vijayadasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ