ಬಿಡುವೇನೇನಯ್ಯ ಹನುಮ
ಕೀರ್ತನಕಾರರು : ಪುರಂದರದಾಸರು
ಬಿಡುವೇನೇನಯ್ಯ ಹನುಮ ಸುಮ್ಮನೆ ಬಿಡುವೇನೇನಯ್ಯ ||ಪ||
ಬಿಡುವೆನೇನೋ ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಒಡೆಯನಲ್ಲಿ ಜ್ಞಾನ ಭಕುತಿಯ ಕೊಡುವ ತನಕ ಸುಮ್ಮನೇ ನಿನ್ನ ||೧||
ಹಸ್ತವನ್ನು ಎತ್ತಿದರೇನು ಹಾರಗಳನ್ನು ಇಟ್ಟರೆ ಏನು
ಭೃತ್ಯನು ನಿನ್ನವನು ನಾನು ಹಸ್ತಿವರ್ಧನ ತೋರುವ ತನಕ ||೨||
ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು
ಫುಲ್ಲನಾಭ ನಲ್ಲಿ ಎನ್ನ ಮನಸಾ ನೀ ನಿಲ್ಲಿಸುವ ತನಕ ||೩||
ಡೊಂಕು ಮೋರೆಯ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ
ಕಿಂಕರ ನಿನ್ನವನು ನಾನು ಪುರಂಧರ ವಿಠಲನ ತೋರುವ ತನಕ ||೪||
Labels: ಬಿಡುವೇನೇನಯ್ಯ ಹನುಮ, Biduvanenayya Hanuma, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ