ಲೋಕಭರಿತನೋ ರಂಗಾನೇಕ ಚರಿತನೋ
ಕೀರ್ತನಕಾರರು : ವಾದಿರಾಜರು
ರಾಗ : ಪೂರ್ವಿಕಲ್ಯಾಣಿ
ತಾಳ : ಛಾಪು
ಲೋಕಭರಿತನೋ ರಂಗಾನೇಕ ಚರಿತನೋ ||ಪ||
ಕಾಕುಜನರ ಮುರಿದು ತನ್ನ ಏಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||
ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-
ರಾಜಸುತನು ಈತನೇ ಸರ್ವ ಪೂಜೆಗರ್ಹನೆನಿಸಿದಾತ ||೧||
ಮಿಕ್ಕ ನೃಪರ ಜರಿದು ಅಮಿತ ವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ ||೨||
ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲು
ಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ ||೩||
ಉತ್ತರೆಯ ಗರ್ಭದಲ್ಲಿ ಸುತ್ತಿ ಮುತ್ತಿದಸ್ಟ್ರವನ್ನು
ಒತ್ತಿ ಚಕ್ರದಿಂದ ನಿಜ ಭಕ್ತ ಪರೀಕ್ಷಿತನ ಕಾಯ್ದ ||೪||
ತನ್ನ ಸೇವಕ ಜನರಿಗೊಲಿದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಪೊರೆವ ಪ್ರಸನ್ನ ಹಯವದನ ಕೃಷ್ಣ ||೫||
Labels: ಲೋಕಭರಿತನೋ ರಂಗಾನೇಕ ಚರಿತನೋ, Lokabharitano Ranganekacharitano, ವಾದಿರಾಜರು, Vadirajaru

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ