ನೀಕರುಣಿಸೋ ವಿಠ್ಠಲ
ಕೀರ್ತನಕಾರರು : ಪ್ರಸನ್ನ ವೆಂಕಟದಾಸರು
ನೀಕರುಣಿಸೋ ವಿಠ್ಠಲ ನಮ್ಮ ಸಾಕೋ ಪಂಡರಿ ವಿಠ್ಠಲಾ ||ಪ||
ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೇ ವಿಠ್ಠಲಾ
ನಾಸುವೆಯಷ್ಟು ಬಕುತಿಯನರಿಯೆನು ಶೇಷಶಯನ ಹರಿ ವಿಠಲಾ ||೧||
ಭವಸಾಗರದೊಳು ಮುಳಿಗುವೆ ಸುಮ್ಮನೆ ಅವಲೋಕಿಪರೆ ವಿಠ್ಠಲಾ
ನವನವ ವಿಷಯಕೆ ಹಿಗ್ಗುತಲಿಹ ಮನದವಸರ ಕಾಯೊ ವಿಠ್ಠಲಾ ||೨||
ನಿಶಿದಿನ ಅಶನಾ ವಸನಕೆ ಹೆಣಗಿ ಹುಸಿಯ ಸಂಗ್ರಹಿಸಿದೆ ವಿಠ್ಠಲಾ
ನಿಷೇಧ ಮಾಯ ಇಲ್ಲವು ನರಕದ ಗಸಣಿಗೆ ಅಂಜುವೆ ವಿಠ್ಠಲಾ ||೩||
ತನು ಸಂಬಂಧಿಗಳತಿಕಾಯಾರ್ಥರು ಎನಗ್ಯಾರಿಲ್ಲೊ ವಿಠ್ಠಲಾ
ಬಿನುಗುಮಾನವರ ಅನುಸರಣಿಯಲಿ ದಣಿಸದಿರಯ್ಯ ವಿಠ್ಠಲಾ ||೪||
ಝವಕೆ ಮಾಡುವೆ ಸಾವಿರ ತಪ್ಪನು ಕಾಯೋ ದಯಾಂಬುದಿ ವಿಠ್ಠಲಾ
ಶ್ರೀವರ ಪ್ರಸನ್ನವೆಂಕಟವಿಠಲಾ ಜೀವಕೆ ಹೊಣೆ ನೀ ವಿಠಲಾ ||೫||
Labels: ನೀಕರುಣಿಸೋ ವಿಠ್ಠಲ, Nee Karuniso Vithala, ಪ್ರಸನ್ನ ವೆಂಕಟದಾಸರು, Prasanna Venkatadasaru

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ