ಮಂಗಳವಾರ, ಸೆಪ್ಟೆಂಬರ್ 10, 2013

ಸಕಲಗ್ರಹ ಬಲ ನೀನೇ : Sakalagraha Bala Neene

ಸಕಲಗ್ರಹ ಬಲ ನೀನೇ

ಕೀರ್ತನಕಾರರು : ಪುರಂದರದಾಸರು
ರಾಗ : ಆಠಾಣ
ತಾಳ : ಖಂಡಛಾಪು

ಸಕಲಗ್ರಹಬಲ ನೀನೇ ಸರಸಿಜಾಕ್ಷ
ನಿಖಿಳ ರಕ್ಷಕ ನೀನೆ ವಿಶ್ವವ್ಯಾಪಕನೇ                 ||ಪ||

ರವಿ ಚಂದ್ರ ಬುಧ ನೀನೆ ರಾಹು ಕೇತುವು ನೀನೆ
ಕವಿ ಗುರುವು ಶನಿಯು ಮಂಗಳನು ನೀನೆ
ದಿವ ರಾತ್ರಿಯು ನೀನೆ ನವವಿಧಾನವು ನೀನೆ
ಭವರೋಗಹರ ನೀನೆ ಭೇಷಜನು ನೀನೆ             ||೧||

ಪಕ್ಷಮಾಸವು ನೀನೆ ಪರ್ವಕಾಲವು ನೀನೆ
ನಕ್ಷತ್ರ ಯೋಗ ತಿಥಿ ಕರಣಗಳು ನೀನೆ
ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ
ಪಕ್ಷಿವಾಹನ ದೀನರಕ್ಷಕನು ನೀನೆ                      ||೨||

ಋತು ವತ್ಸರವು ನೀನೆ ಪ್ರುಥಿವ್ಯುಗಾದಿಯು ನೀನೆ
ಕ್ರತು ಹೋಮ ಯಜ್ಞ ಸದ್ಗತಿಯು ನೀನೆ
ಜಿತವಾಗಿ ಎನ್ನೊಡೆಯ ಪುರಂದರವಿಠ್ಠಲನೆ
ಶ್ರುತಿಗೆ ಸಿಲುಕದ ಮಹಾಮಹಿಮನು ನೀನೆ         ||೩||

Labels: ಸಕಲಗ್ರಹ ಬಲ ನೀನೇ, Sakalagraha Bala Neene,
ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ