ಸೋಮವಾರ, ಸೆಪ್ಟೆಂಬರ್ 9, 2013

ಘಟಿಕಾಚಲದಿ ನಿಂತಾ ಹನುಮಂತಾ : Ghatikachaladi Ninta Hanumanta

ಘಟಿಕಾಚಲದಿ ನಿಂತಾ ಹನುಮಂತಾ

ಕೀರ್ತನಕಾರರು : ಪುರಂದರದಾಸರು
ರಾಗ : ನಾಟ
ತಾಳ : ಅಟ್ಟ

ಘಟಿಕಾಚಲದಿ ನಿಂತಾ ಹನುಮಂತಾ
ಘಟಿಕಾಚಲದಿ ನಿಂತಾ                                   ||ಪ||

ಘಟಿಕಾಚಲದಿ ನಿಂತ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೊರೆವೆನೆಂದು       ||ಅ.ಪ||

ಚತುರಯುಗದಿ ತಾ ಅತಿಬಲವಂತನು
ಚತುರ್ಮುಖನಯ್ಯನ
ಚತುರ ಮೂರ್ತಿಗಳ ಚತುರತನದಿ ಭಜಿಸಿ
ಚತುರ್ಮುಖನಾಗಿ ಚತುರ್ವಿಧ ಫಲಕೊಡುತ     ||೧||

ಸರಸಿಜಭವಗೋಸ್ಕರ ಕಲ್ಮಷದೂರ
ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯನರಹರಿಗೆದುರಾಗಿ
ಸ್ಥಿರಯೋಗಾಸನದಿ ವರವಕೊಡುವೆನೆಂದು       ||೨||

ಶಂಖಚಕ್ರವಧರಿಸಿ ಭಕ್ತರ ಮನ
ಪಂಕವ ಪರಿಹರಿಸಿ
ಪಂಕಜನಾಭ ಶ್ರೀಪುರಂದರವಿಠಲನ
ಬಿಂಕದ ಸೇವಕ ಸಂಕಟಕಳೆಯುತ                ||೩||

Labels: ಘಟಿಕಾಚಲದಿ ನಿಂತಾ ಹನುಮಂತಾ, Ghatikachaladi Ninta Hanumanta
, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ