ಸೋಮವಾರ, ಸೆಪ್ಟೆಂಬರ್ 9, 2013

ಊರಿಗೆ ಬಂದರೆ ದಾಸಯ್ಯ : Urige Bandare Dasayya

ಊರಿಗೆ ಬಂದರೆ ದಾಸಯ್ಯ 

ಕೀರ್ತನಕಾರರು : ಪುರಂದರದಾಸರು
ರಾಗ : ಹಿಂದುಸ್ಥಾನಿ ಕಾಪಿ
ತಾಳ : ಆದಿ

ಊರಿಗೆ ಬಂದರೆ ದಾಸಯ್ಯ 
ನಮ್ಮ ಕೇರಿಗೆ ಬಾ ಕಂಡ್ಯ ದಾಸಯ್ಯ          ||ಪ||

ಕೇರಿಗೆ ಬಂದರೆ ದಾಸಯ್ಯ 
ಗೊಲ್ಲ ಕೇರಿಗೆ ಬಾಕಂಡ್ಯ ದಾಸಯ್ಯ           ||ಅ.ಪ||

ಕೊರಳೊಳು ವನಮಾಲೆ ಧರಿಸಿದನೆ
ಕಿರುಬೆರಳಲಿ ಬೆಟ್ಟವ ನೆತ್ತಿದನೆ
ಇರುಳು ಹಗಲು ನಿನ್ನ ಕಾಣದೆ ಇರಲಾರೆ
ಮರುಳು ಮಾಡಿದಂಥ ದಾಸಯ್ಯ             ||೧||

ಕಪ್ಪು ವರ್ಣದ ದಾಸಯ್ಯ
ಕಂದರ್ಪನ ಪಿತನೆಂಬೊ ದಾಸಯ್ಯ
ಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆ
ಅಪ್ಪವ ಕೊಡುವೆನು ದಾಸಯ್ಯ               ||೨||

ಮುಂದೇನು ದಾರಿ ದಾಸಯ್ಯ
ಚೆಲ್ವ ಪೊಂಗೊಳಲುದೂವ ದಾಸಯ್ಯ
ಹಾಂಗೆ ಪೋಗಾದಿರು ದಾಸಯ್ಯ
ಹೊನ್ನುಂಗುರ ಕೊಡುವೆನು ದಾಸಯ್ಯ         ||೩||

ಸಣ್ಣ ನಾಮದ ದಾಸಯ್ಯ
ನಮ್ಮ ಸದನಕೆ ಬಾಕಂಡ್ಯ ದಾಸಯ್ಯ
ಸದನಕೆ ಬಂದರೆ ದಾಸಯ್ಯ
ಮಣಿ ಸರವನು ಕೊಡುವೆನು ದಾಸಯ್ಯ       ||೪||

ಸಿಟ್ಟು ಮಾಡದಿರು ದಾಸಯ್ಯ
ನಿರಿ ಪುರಂದರ ವಿಠ್ಠಲ ದಾಸಯ್ಯ
ಟಟ್ಟು ಮಾಡದಿರು ದಾಸಯ್ಯ
ತಂಬಿಟ್ಟು ಕೊಡುವೆನು ದಾಸಯ್ಯ            ||೫||

Labels: ಊರಿಗೆ ಬಂದರೆ ದಾಸಯ್ಯ, Urige Bandare Dasayya
, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ