ರಾಮ ನಾಮ ಪಾಯಸಕ್ಕೆ
ಕೀರ್ತನಕಾರರು : ಪುರಂದರದಾಸರು
ರಾಗ : ಆನಂದಭೈರವಿ
ತಾಳ : ರೂಪಕ
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೋ ||ಪ||
ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು ||೧||
ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು ||೨||
ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೊ ||೩||
Labels: ರಾಮ ನಾಮ ಪಾಯಸಕ್ಕೆ, Rama Nama Payasakke, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ