ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
ಕೀರ್ತನಕಾರರು : ಪುರಂದರದಾಸರು
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ||ಪ||
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ.ಪ||
ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ
ಕಾದುಕೋ ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ ||೧||
ದಯದಿಂದ ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ
ದಯ ಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ ಸುವ್ರತೆ ಹಯವದನನ ಪ್ರೀತೆ ||೨||
ನೀನಲ್ಲದನ್ಯ ರಕ್ಷಿಪರನ್ನು ಕಾಣೆ ನಾ ಮುನ್ನ
ದಾನವಾಂತಕ ಸಿರಿಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ ||೩||
Labels: ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ, Palise Enna Srimahalakshmi, ಪುರಂದರದಾಸರು, Purandaradasaru
ಕೀರ್ತನಕಾರರು : ಪುರಂದರದಾಸರು
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ||ಪ||
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ.ಪ||
ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ
ಕಾದುಕೋ ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ ||೧||
ದಯದಿಂದ ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ
ದಯ ಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ ಸುವ್ರತೆ ಹಯವದನನ ಪ್ರೀತೆ ||೨||
ನೀನಲ್ಲದನ್ಯ ರಕ್ಷಿಪರನ್ನು ಕಾಣೆ ನಾ ಮುನ್ನ
ದಾನವಾಂತಕ ಸಿರಿಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ ||೩||
Labels: ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ, Palise Enna Srimahalakshmi, ಪುರಂದರದಾಸರು, Purandaradasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ