ಶಿವನೇ ನಾ ನಿನ್ನ ಸೇವಕನಯ್ಯ
ಕೀರ್ತನಕಾರರು : ಶ್ರೀದವಿಠಲದಾಸರು
ರಾಗ : ಮೋಹನ
ತಾಳ : ಆದಿ
ಶಿವನೇ ನಾ ನಿನ್ನ ಸೇವಕನಯ್ಯ
ಕರುಣದಿ ಪಿಡಿ ಕೈಯ್ಯಾ ಶಿರಿಧರನರಮಯ್ಯ ||ಪ||
ಭವಮೋಚಕ ಭಾಗವತಶಾಸ್ತ್ರವನು
ಅವನೀಶಗೆ ಪೇಳ್ದವ ನೀನಲ್ಲವೆ ||ಅ.ಪ||
ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ
ಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬ
ವೈಕಲ್ಯಾಸ್ಪದವ ಕಳೆದೊಮ್ಮಿಗೆ
ವೈಕುಂಠಕೆ ಕರೆದೊಯ್ಯೊ ಕರಿಗೊರಳಾ ||೧||
ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವ
ಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವ
ಕೃತ್ತಿವಾಸ ಎನ್ನತ್ಯಪರಾಧಗ
ಳೆತ್ತಿಣಿಸದೆ ಕೃತಕೃತ್ಯನ ಮಾಡೈ ||೨||
ಗಂಗಾಧರ ಷಣ್ಮುಖಗಣಪರ ತಾತ ತ್ರೈಲೋಕ್ಯತ್ರಾತ
ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ
ತುಂಗಮಹಿಮ ನಿಸ್ಸಂಗ ಹರಿಯ ದ್ವಿತಿ
ಯಂಗ ಡಮರು ಶೂಲಂಗಳ ಪಿಡಿದಿಹ ||೩||
ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ
ಸಂಚಿಂತನಮಾಡುವ ಸಂತತನೇಮ ಶ್ರೀರಾಮನಾಮ
ಪಂಚಶರಾರಿ ವಿರಿಂಚಿಕುವರ ನಿ
ಷ್ಕಿಂಚನರೊಡೆಯನ ಮಂಚಪದಾರ್ಹನೆ ||೪||
ಸ್ಫಟಿಕಾಭ ಕಪಾಲಿ ಕಾಮಿತಫಲದಾ ಫಲ್ಗುಣಸಖ ಶ್ರೀದ
ವಿಠಲ ವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ
ಕುಟಿಲರಹಿತ ಧೂರ್ಜಟಿ ವೃಷಭಧ್ವಜ
ನಿಟಿಲನಯನ ಸಂಕಟವ ನಿವಾರಿಸೊ ||೫||
Labels: ಶಿವನೇ ನಾ ನಿನ್ನ ಸೇವಕನಯ್ಯ, Shivane Na Ninna Sevakanayya, ಶ್ರೀದವಿಠಲದಾಸರು, Sridavithaladasaru
ಕೀರ್ತನಕಾರರು : ಶ್ರೀದವಿಠಲದಾಸರು
ರಾಗ : ಮೋಹನ
ತಾಳ : ಆದಿ
ಶಿವನೇ ನಾ ನಿನ್ನ ಸೇವಕನಯ್ಯ
ಕರುಣದಿ ಪಿಡಿ ಕೈಯ್ಯಾ ಶಿರಿಧರನರಮಯ್ಯ ||ಪ||
ಭವಮೋಚಕ ಭಾಗವತಶಾಸ್ತ್ರವನು
ಅವನೀಶಗೆ ಪೇಳ್ದವ ನೀನಲ್ಲವೆ ||ಅ.ಪ||
ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ
ಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬ
ವೈಕಲ್ಯಾಸ್ಪದವ ಕಳೆದೊಮ್ಮಿಗೆ
ವೈಕುಂಠಕೆ ಕರೆದೊಯ್ಯೊ ಕರಿಗೊರಳಾ ||೧||
ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳಕಾವ
ಸ್ತುತ್ಯಾದ್ರಿಜ ದಿತಿಜತತೀವನದಾವಾ ದುರಿತಾಂಬುಧಿನಾವ
ಕೃತ್ತಿವಾಸ ಎನ್ನತ್ಯಪರಾಧಗ
ಳೆತ್ತಿಣಿಸದೆ ಕೃತಕೃತ್ಯನ ಮಾಡೈ ||೨||
ಗಂಗಾಧರ ಷಣ್ಮುಖಗಣಪರ ತಾತ ತ್ರೈಲೋಕ್ಯತ್ರಾತ
ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ
ತುಂಗಮಹಿಮ ನಿಸ್ಸಂಗ ಹರಿಯ ದ್ವಿತಿ
ಯಂಗ ಡಮರು ಶೂಲಂಗಳ ಪಿಡಿದಿಹ ||೩||
ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ
ಸಂಚಿಂತನಮಾಡುವ ಸಂತತನೇಮ ಶ್ರೀರಾಮನಾಮ
ಪಂಚಶರಾರಿ ವಿರಿಂಚಿಕುವರ ನಿ
ಷ್ಕಿಂಚನರೊಡೆಯನ ಮಂಚಪದಾರ್ಹನೆ ||೪||
ಸ್ಫಟಿಕಾಭ ಕಪಾಲಿ ಕಾಮಿತಫಲದಾ ಫಲ್ಗುಣಸಖ ಶ್ರೀದ
ವಿಠಲ ವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ
ಕುಟಿಲರಹಿತ ಧೂರ್ಜಟಿ ವೃಷಭಧ್ವಜ
ನಿಟಿಲನಯನ ಸಂಕಟವ ನಿವಾರಿಸೊ ||೫||
Labels: ಶಿವನೇ ನಾ ನಿನ್ನ ಸೇವಕನಯ್ಯ, Shivane Na Ninna Sevakanayya, ಶ್ರೀದವಿಠಲದಾಸರು, Sridavithaladasaru
ಕೀರ್ತನೆಕಾರರು:ಕಲ್ಲೂರು ಸುಬ್ಬಣ್ಣಾಚಾರ್ಯರು(ವಿಜಯದಾಸರ ಶಿಷ್ಯರು)
ಪ್ರತ್ಯುತ್ತರಅಳಿಸಿ