ಸೋಮವಾರ, ಸೆಪ್ಟೆಂಬರ್ 9, 2013

ಧವಳಗಂಗೆಯ ಗಂಗಾಧರ : Dhavalagangeya Gangadhara

ಧವಳಗಂಗೆಯ ಗಂಗಾಧರ

ಕೀರ್ತನಕಾರರು : ವಾದಿರಾಜರು
ರಾಗ : ಮಧ್ಯಮಾವತು
ತಾಳ : ಅಟ್ಟ

ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರಿಸಯ್ಯಾ ಗುರುಕುಲೋತ್ತುಂಗ        ||ಪ||

ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಯುತಗಲ್ಲದ ಅಸುರರ ಬಡಿವ                ||೧||

ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರಿಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ ಮು
ರಾರಿಯ ತೋರಯ್ಯಾ ನಿಮಗೆ ಶರಣಾರ್ತಿ        ||೨||

ಚೆನ್ನ ಪ್ರಸನ್ನ ಶ್ರೀಹಯವದನನ್ನ
ಅನುದಿನ ನೆನೆವಂತೆ ಮಾಡೋ ನೀ ಎನ್ನ
ಅನ್ಯನಲ್ಲವೋ ನಾನು ಗುರುವೆಂಬ ನಿನ್ನ
ಇನ್ನಾದರು ಹರಿಯ ತೋರೊ ಮುಕ್ಕಣ್ಣ          ||೩||

Labels: ಧವಳಗಂಗೆಯ ಗಂಗಾಧರ, Dhavalagangeya Gangadhara
, ವಾದಿರಾಜರು, Vadirajaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ