ದಾಸರೆಂದರೆ ಪುರಂದರದಾಸರಯ್ಯ
ಕೀರ್ತನಕಾರರು : ವ್ಯಾಸರಾಯರು
ರಾಗ : ಕಾಂಬೋಧಿ
ತಾಳ : ಝಂಪೆ
ದಾಸರೆಂದರೆ ಪುರಂದರದಾಸರಯ್ಯ ||ಪ||
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ ||ಅ.ಪ||
ಗ್ರಾಸಕಿಲ್ಲದೇ ಪೋಗಿ ಪರರ ಮನೆಗಳ ಪೊಕ್ಕು
ದಾಸನೆಂದೂ ತುಲಸಿಮಾಲೆ ಧರಿಸೀ
ಬ್ಯಾಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ
ಕಾಸುಗಳಿಸುವ ಅವನು ಹರಿದಾಸನೇ ||೧||
ಡಂಭಕದಿ ಹರಿಸ್ಮರಣೆ ಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವಪಿತನ ಆಗಮಗಳರಿಯದೆಲೆ
ತಂಬೂರಿ ಮೀಟಲವ ಹರಿದಾಸನೇ ||೨||
ಯಾಯಿವಾರವಮಾಡಿ ವಿಪ್ರರಿಗೆ ಮೃಷ್ಟಾನ್ನ
ಪ್ರೀಯದಲಿ ತಾನೊಂದು ಕೊಡದೆ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ಹರಿದಾಸನೇ ||೩||
ಪಾಠಕನ ತೆರೆನಂತೆ ಪದಗಳನು ತಾ ಬೊಗಳಿ
ಕೂಟಜನರಾ ಮನವ ಸಂತೋಷಪಡಿಸಿ
ಗೂಟನಾಮಗಳಿಟ್ಟು ಕೊಟ್ಟರಿಯೇ ತಾನೆನುತ
ತೂಟಕವ ಮಾಡಲವ ಹರಿದಾಸನೇ ||೪||
ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಿಸುತ
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ
ಪೂತಾತ್ಮ ಪುರಂದರದಾಸರಿವರಯ್ಯ ||೫||
Labels: ದಾಸರೆಂದರೆ ಪುರಂದರದಾಸರಯ್ಯ, Dasarendare Purandaradasarayya, ವ್ಯಾಸರಾಯರು, Vyasarayaru
ಕೀರ್ತನಕಾರರು : ವ್ಯಾಸರಾಯರು
ರಾಗ : ಕಾಂಬೋಧಿ
ತಾಳ : ಝಂಪೆ
ದಾಸರೆಂದರೆ ಪುರಂದರದಾಸರಯ್ಯ ||ಪ||
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವ ||ಅ.ಪ||
ಗ್ರಾಸಕಿಲ್ಲದೇ ಪೋಗಿ ಪರರ ಮನೆಗಳ ಪೊಕ್ಕು
ದಾಸನೆಂದೂ ತುಲಸಿಮಾಲೆ ಧರಿಸೀ
ಬ್ಯಾಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ
ಕಾಸುಗಳಿಸುವ ಅವನು ಹರಿದಾಸನೇ ||೧||
ಡಂಭಕದಿ ಹರಿಸ್ಮರಣೆ ಮಾಡಿ ಜನರಾ ಮುಂದೆ
ಸಂಭ್ರಮದಿ ತಾನುಂಬ ಊಟ ಬಯಸಿ
ಅಂಬುಜೋದ್ಭವಪಿತನ ಆಗಮಗಳರಿಯದೆಲೆ
ತಂಬೂರಿ ಮೀಟಲವ ಹರಿದಾಸನೇ ||೨||
ಯಾಯಿವಾರವಮಾಡಿ ವಿಪ್ರರಿಗೆ ಮೃಷ್ಟಾನ್ನ
ಪ್ರೀಯದಲಿ ತಾನೊಂದು ಕೊಡದೆ ಲೋಭಿ
ಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟು
ಗಾಯನವ ಮಾಡಲವ ಹರಿದಾಸನೇ ||೩||
ಪಾಠಕನ ತೆರೆನಂತೆ ಪದಗಳನು ತಾ ಬೊಗಳಿ
ಕೂಟಜನರಾ ಮನವ ಸಂತೋಷಪಡಿಸಿ
ಗೂಟನಾಮಗಳಿಟ್ಟು ಕೊಟ್ಟರಿಯೇ ತಾನೆನುತ
ತೂಟಕವ ಮಾಡಲವ ಹರಿದಾಸನೇ ||೪||
ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಿಸುತ
ಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವ
ಪೂತಾತ್ಮ ಪುರಂದರದಾಸರಿವರಯ್ಯ ||೫||
Labels: ದಾಸರೆಂದರೆ ಪುರಂದರದಾಸರಯ್ಯ, Dasarendare Purandaradasarayya, ವ್ಯಾಸರಾಯರು, Vyasarayaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ