ಯತಿಕುಲಮುಕುಟ ಶ್ರೀಜಯತೀರ್ಥ
ಕೀರ್ತನಕಾರರು : ಜಯತೀರ್ಥರು
ಯತಿಕುಲಮುಕುಟ ಶ್ರೀಜಯತೀರ್ಥ ಸದ್ಗುಣಭರಿತ ||ಪ||
ಅತಿಸದ್ಭಕುತಿಲಿ ನುತಿಪ ಜನರ ಸಂ
ತತ ಪಾಲಿಸುತಲಿ ಪೃಥಿವಿಲಿ ಮೆರೆವ ||ಅ.ಪ||
ಶ್ರೀಮಧ್ವಮತವಾರಿಧಿ ನಿಜಸೋಮ ಅಗಣಿತಸನ್ಮಹಿಮ
ಆ ಮಹಾ ಭಕ್ತಾರ್ತಿಹ ನಿಷ್ಕಾಮ ಮುನಿಸಾರ್ವಭೌಮ
ರಾಮಪದಾರ್ಚಕ ಈ ಮಹೀಸುರರನು
ಪ್ರೇಮದಿ ಪಾಲಿಪ ಕಾಮಿತಫಲದ ||೧||
ಮಧ್ವಮುನಿಗಳ ಗ್ರಂಥಕೆ ವ್ಯಾಖ್ಯಾನ ರಚಿಸಿದ ಸುಜ್ಞಾನ
ವಿದ್ಯಾರಣ್ಯನ ಸದ್ವಾದದಿ ನಿಧನ ಗೈಸಿದ ಸುಖಸದನ
ಅದ್ವೈತಾಟವಿದಗ್ಧ ಕೃತಾನಲ
ಸದ್ವೈಷ್ಣವಹೃತ್ಪದ್ಮಸುನಿಲಯ ||೨||
ಲಲಿತ ಮಂಗಳವೇಡಿಸ್ಥ ರಘುನಾಥ ವನಿತಾಸಂಜಾತ
ನಿಲಯ ಮಳಖೇಡ ಕಾಗಿಣಿ ತೀರ ವಾಸ ತಾಪತ್ರಯದೂರ
ನಲಿವ ವರದೇಶವಿಠಲನ ಒಲುಮೆಯ
ಇಳೆಯೊಳು ಬೋಧಿಪ ಅಲವಬೋಧಾಪ್ತಾ ||೩||
Labels: ಯತಿಕುಲಮುಕುಟ ಶ್ರೀಜಯತೀರ್ಥ, Yatikulamukuta Sri Jayathiratha, ಜಯತೀರ್ಥರು, Jayateertharu
ಕೀರ್ತನಕಾರರು : ಜಯತೀರ್ಥರು
ಯತಿಕುಲಮುಕುಟ ಶ್ರೀಜಯತೀರ್ಥ ಸದ್ಗುಣಭರಿತ ||ಪ||
ಅತಿಸದ್ಭಕುತಿಲಿ ನುತಿಪ ಜನರ ಸಂ
ತತ ಪಾಲಿಸುತಲಿ ಪೃಥಿವಿಲಿ ಮೆರೆವ ||ಅ.ಪ||
ಶ್ರೀಮಧ್ವಮತವಾರಿಧಿ ನಿಜಸೋಮ ಅಗಣಿತಸನ್ಮಹಿಮ
ಆ ಮಹಾ ಭಕ್ತಾರ್ತಿಹ ನಿಷ್ಕಾಮ ಮುನಿಸಾರ್ವಭೌಮ
ರಾಮಪದಾರ್ಚಕ ಈ ಮಹೀಸುರರನು
ಪ್ರೇಮದಿ ಪಾಲಿಪ ಕಾಮಿತಫಲದ ||೧||
ಮಧ್ವಮುನಿಗಳ ಗ್ರಂಥಕೆ ವ್ಯಾಖ್ಯಾನ ರಚಿಸಿದ ಸುಜ್ಞಾನ
ವಿದ್ಯಾರಣ್ಯನ ಸದ್ವಾದದಿ ನಿಧನ ಗೈಸಿದ ಸುಖಸದನ
ಅದ್ವೈತಾಟವಿದಗ್ಧ ಕೃತಾನಲ
ಸದ್ವೈಷ್ಣವಹೃತ್ಪದ್ಮಸುನಿಲಯ ||೨||
ಲಲಿತ ಮಂಗಳವೇಡಿಸ್ಥ ರಘುನಾಥ ವನಿತಾಸಂಜಾತ
ನಿಲಯ ಮಳಖೇಡ ಕಾಗಿಣಿ ತೀರ ವಾಸ ತಾಪತ್ರಯದೂರ
ನಲಿವ ವರದೇಶವಿಠಲನ ಒಲುಮೆಯ
ಇಳೆಯೊಳು ಬೋಧಿಪ ಅಲವಬೋಧಾಪ್ತಾ ||೩||
Labels: ಯತಿಕುಲಮುಕುಟ ಶ್ರೀಜಯತೀರ್ಥ, Yatikulamukuta Sri Jayathiratha, ಜಯತೀರ್ಥರು, Jayateertharu
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ