ಕುಂಟೋಜಿ ನರಸಿಂಹದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕುಂಟೋಜಿ ನರಸಿಂಹದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 28, 2013

ಮಧುರೆಗೆ ಪೋಗಬ್ಯಾಡವೊ ಕೃಷ್ಣಾ : Madhurege Pogabyadavo Krishna

ಮಧುರೆಗೆ ಪೋಗಬ್ಯಾಡವೊ ಕೃಷ್ಣಾ

ಕೀರ್ತನಕಾರರು : ಕುಂಟೋಜಿ ನರಸಿಂಹದಾಸರು

ಮಧುರೆಗೆ ಪೋಗಬ್ಯಾಡವೊ ಕೃಷ್ಣಾ ಬ್ಯಾಡವೊ 
ಬೇಡಿಕೊಂಬುವೆವು ಇಲ್ಲೇ ಇರು ಪೋಗಬ್ಯಾಡವೊ              ।।ಪ॥ 

ಜನನಿ ಜನಕರನ್ನು ಮರೆದು ನಮ್ಮ 
ಮನಿಯ ಮಕ್ಕಳನೆಲ್ಲ ತೊರೆದು ಸ್ವಾಮಿ 
ಮನಸಿಜ ಪಿತ ನೀನು ಅನಿಮಿತ್ತ ಬಂಧು ಎಂದು 
ಕನಸಿನೊಳಗೆ ಸಹ ನೆನೆವೆವೊ ಮರೆಯಾದೆ 
ಚಿನುಮಯ ಮೂರುತಿ ಅನಿಮಿಷರೊಡೆಯನೆ 
ಜನುಮಜನುಮದಲಿ ನಮ್ಮನಗಲ ಬ್ಯಾಡವೊ                   ।।೧।।

ಉದಯದಲೆದ್ದು ನಿನ್ನ ಪಾದವ ನೋಡಿ
ಮುದದಿಂದಾಡುವೆವಲ್ಲೋ ಮಾಧವ ಆವ 
ಕದನಗಡಕ ಕಂಸ ಸದನಕೆ ಬಾಯೆಂದಾ 
ಮಧುವೈರಿ ನೀನೆಂಬೋದರಿಯನೊ ಮದಗರ್ವ 
ಶ್ರೀಧರ ನಿನ್ನ ಪಾದಕೆ ನಮಿಪೆವೊ 
ಸೋದರಮಾವನ ಊರಿಗೆ ಪೋಗಬ್ಯಾಡವೊ                  ।।೨।।

ಊರ ಒಳಗೆ ನಮಗೆಲ್ಲಾರು ಮಹಾ 
ಜಾರರು ಇವರೆಂದು ಪೇಳ್ವರು ಸ್ವಾಮಿ 
ದೂರಿದರ‍್ಯಾತಕೆ ದೂರವಲ್ಲರೊ ಕೃಷ್ಣ 
ಮೋರಿಯ ನೋಡದೆ ನಾವಿರಲಾರೆವೊ 
ಊರಿಗೆ ಪೋದರೆ ಬಾರದೆ ನಿಲ್ಲೆವು 
ದಾರಿಯ ತೋರಿಸು ಗುರುಶ್ರೀಶವಿಥ್ಥಳ                          ।।೩।।  

Labels: ಮಧುರೆಗೆ ಪೋಗಬ್ಯಾಡವೊ ಕೃಷ್ಣಾ, Madhurege Pogabyadavo Krishna, ಕುಂಟೋಜಿ ನರಸಿಂಹದಾಸರು, Kuntoji Narasimhadaasaru

ಮಂಗಳವಾರ, ಆಗಸ್ಟ್ 13, 2013

ಹೊತ್ತು ಹೋಯಿತಲ್ಲಾ : Hottu Hoyitalla

ಹೊತ್ತು ಹೋಯಿತಲ್ಲಾ 

ಕೀರ್ತನಕಾರರು : ಕುಂಟೋಜಿ ನರಸಿಂಹದಾಸರು  

ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ 
ಮತ್ತೆ ಮತ್ತೆ ಉನ್ಮತ್ತರ ಸಂಗದಿ 
ಉತ್ತಮರಿಗೆ ಕರವೆತ್ತಿ ಮುಗಿಯದಲೆ                                 ।।ಪ।।

ನಿತ್ಯ ನಿತ್ಯದಲ್ಲಿ ಪರರ ವಿತ್ತವ ಬಯಸುತಲಿ
ಹತ್ತಿ ಹೊಂದಿದವರೆಂದು ಮೋಹಕ ಬಿದ್ದು 
ಚಿತ್ತಜ ಪಿತನನೇಕ ಚಿತ್ತದಿ ನೆನೆಯದೆ                                ।।೧।।

ಕುಜನರ ಬಳಿವಿಡಿದು ಸುಕರ್ಮವು ಯಜನಾದಿಗಳ ಜರಿದು 
ಭುಜಗಶಯನ ನಿನ್ನ ಭಜನಿಯ ಮಾಡುವ 
ಸುಜನರ ಚರಣಾಂಬುಜವನೆ ಪಿಡಿಯದೆ                             ।।೨।।

ಉದರಭರಣೆಗಾಗಿ ಸರ್ವದಾ ಅಧಮರ ಹಿಂದೆ ತಿರುಗಿ 
ಬುಧರ ಸೇವೆಯು ಮಾಡಿ ಹೃದಯ ಕಮಲದಲ್ಲಿ 
ಪದುಮನಾಭನ ಪಾದ ಮುದದಿ ಧೇನಿಸದೆ                          ।।೩।।

ಜ್ಞಾನವಂತರ ಸಂಗ ಮಂದ ಜ್ಞಾನಿಗೇನೋ ರಂಗ 
ದೀನ ವಾತ್ಸಲ ನೀ ದೀನರಿಗಲ್ಲದಲೇ 
ಹೀನಗುಣದವನಿಗೇನು ಗತಿಯೋ ಕೃಷ್ಣಾ                             ।।೪।।

ಪರಮಪುರುಷ ಹರಿಯೇ ಎನ್ನ ನೀ ಕರಪಿಡಿಯೋ ದೊರಿಯೇ 
ಅರಘಳಿಗ್ಯಾದರೂ ಗುರುಶ್ರೀಶವಿಠ್ಠಲ
ಪರಮ ಪಾವನ ನಿನ್ನ ಚರಣವ ಸ್ಮರಿಸದೆ                             ।।೫।।

Labels: ಹೊತ್ತು ಹೋಯಿತಲ್ಲಾ, Hottu Hoyitalla, ಕುಂಟೋಜಿ ನರಸಿಂಹದಾಸರು, Kuntoji Narasimhadaasaru