ಶ್ರೀರಾಮದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶ್ರೀರಾಮದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಆಗಸ್ಟ್ 22, 2013

ಕುಂಟೆ ಹೊಡೆಯೊ ಜಾಣ : Kunte Hodeyo Jana

ಕುಂಟೆ ಹೊಡೆಯೊ ಜಾಣ

ಕೀರ್ತನಕಾರರು : ಶ್ರೀರಾಮದಾಸರು

ಕುಂಟೆ ಹೊಡೆಯೊ ಜಾಣ ಅದನೋಡಿ 
ಕುಂಟೆ ಹರಗೊ ಜಾಣ                                               ।।ಪ॥ 

ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ 
ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನು                     ।।ಅ.ಪ।।

ಅರಿವೆಮಡಿಕೆ ಹೊಡೆಯೊ ಮರವ್ಯೆಂಬ 
ಕರಿಕಿದಡ್ಡನಳಿಯೊ 
ಶರಣೆಂಬಗುದ್ದಲ್ಹಿಡಿಯೊ ಗರುವೆಂಬ 
ದುರಿತಕರಣಗಳಿಗಿಯೊ 
ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ 
ಕರುಣೆಂಬ ಮಾಡಿ ಮಡಿ ಭರದಿ ಹಾಸನ ಮಾಡು             ।।೧।।

ಧ್ಯಾನ ದಾಸರಸೇವೆಯೆಂದೆಂಬುವ 
ಖೂನ ಮಾಡೆಲೊ ಬದುವ 
ದಾನಧರ್ಮಯೆಂಬುವ ಸತತದಿ 
ಹನಿಸುಗೊಬ್ಬರವ 
ಜ್ಞಾನಿಸಂಗವೆಂಬ ಜಾಣ ಬೆದೆಗಾಲದಿ 
ಜ್ಞಾನಕುರಿಗೆಯಿಂದ ಜ್ಞಾನಬೀಜವ ಬಿತ್ತು                         ।।೨।।

ಮನವೆಂಬ ಬೆಳೆ ಕಾಯೊ ನಿಜವಾದ 
ನೆನವೆಂಬ ಕವಣ್ಹಿಡಿಯೊ 
ಮನಚಂಚಲ್ಹಕ್ಕ್ಹೊಡೆಯೊ
ಶಾಂತಿ ಸದ್ಗುಣವೆಂಬ ಫಲ ಪಡೆಯೊ 
ಘನತರ ದೃಢವೆಂಬ ಧಾನ್ಯರಾಸಿ ಮಾಡಿ 
ವನಜಾಕ್ಷ ಶ್ರೀರಾಮನೊನರುಹಕರ್ಪಿಸು                         ।।೩।।

Labels: ಕುಂಟೆ ಹೊಡೆಯೊ ಜಾಣ , Kunte Hodeyo Jana, ಶ್ರೀರಾಮದಾಸರು, Sriramadasaru 

ಅಸೂಯೆ ಬಿಡಿಸೆನ್ನ ಮನಸಿನ : Asuye Bidisenna Manasina

ಅಸೂಯೆ ಬಿಡಿಸೆನ್ನ ಮನಸಿನ

ಕೀರ್ತನಕಾರರು : ಶ್ರೀರಾಮದಾಸರು

ಅಸೂಯೆ ಬಿಡಿಸೆನ್ನ ಮನಸಿನ 
ಅಸೂಯೆ ಬಿಡಿಸೆನ್ನ                                              ।।ಪ॥ 

ಅಸೂಯೆ ಬಿಡಿಸೆನ್ನ ಹೇಸಿಮನಸಿನ                                     
ಈಶ ನಿನ್ನಪಾದ ದಾಸಾನುದಾಸೆನಿಸೋ                   ।।ಅ.ಪ॥ 

ಕೊಟ್ಟರು ಅಷ್ಟೆಯೆನಿಸೋ ಕೊಡದೊದ್ದು 
ಅಟ್ಟಿದರಷ್ಟೆನಿಸೋ 
ಕೊಟ್ಟು ಕೊಡದವರೆಲ್ಲ ಅಷ್ಟೆನಿಸೆನ್ನಗೆ 
ಶಿಷ್ಟಗುಣಿತ್ತು ಪೊರೆ ಸೃಷ್ಟಿಮೇಲೆ ಹರಿ                        ।।೧।।

ಕಡುಸಿರಿ ಅಷ್ಟೆನಿಸೋ ಎನಗೆ ಬಂದ 
ಬಡತನ ಅಷ್ಟೆನಿಸೋ 
ಕಡುಸಿರಿ ಬಡತನ ಅಷ್ಟೇಯೆನಿಸಿ ನಿನ್ನ 
ಅಡಿದೃಢವಿತ್ತು ಪೊರೆ ಪೊಡವಿ ಮೇಲೆ ಹರಿ                 ।।೨।।

ದೂಷಣ ಅಷ್ಟೆಯೆನಿಸೋ ಜಗದೊಳು
ಭೂಷಣ ಅಷ್ಟೆನಿಸೋ 
ದೂಷಣ ಭೂಷಣ ಅಷ್ಟೇಯೆನಿಸಿ ನಿನ್ನ 
ಧ್ಯಾಸಬಿಟ್ಟು ಪೊರೆ ಶ್ರೀಶ ಶ್ರೀರಾಮ ತಂದೆ                ।।೩।।

Labels: ಅಸೂಯೆ ಬಿಡಿಸೆನ್ನ ಮನಸಿನ, Asuye Bidisenna Manasina, ಶ್ರೀರಾಮದಾಸರು, Sriramadasaru

ಮಂಗಳವಾರ, ಆಗಸ್ಟ್ 13, 2013

ಏನು ಮಾಡಿದರೇನು ಏನು ನೋಡಿದರೇನು : Enu Madidarenu Enu Nodidarenu

ಏನು ಮಾಡಿದರೇನು ಏನು ನೋಡಿದರೇನು

ಕೀರ್ತನಕಾರರು : ಶ್ರೀರಾಮದಾಸರು

ಏನು ಮಾಡಿದರೇನು ಏನು ನೋಡಿದರೇನು 
ದಾನವಾಂತಕ ನಿನ್ನನರಿಯದ ಪಾಪಿ                            ।।ಪ॥ 

ನಾನಾ ದೇಶವ ತಿರುಗಿ ಯಾತ್ರೆ ಮಾಡಿದರೇನು 
ನಾನಾ ತೀರ್ಥವ ಮುಳುಗಿ ಸ್ನಾನ ಮಾಡಿದರೇನು 
ನಾನಾ ಕ್ಷೇತ್ರದಿ ನಿಂದು ದಾನವ ಮಾಡಿದರೇನು 
ದೀನರಕ್ಷಕ ನಿನ್ನ ಒಲುಮಿಲ್ಲದವರು                                ।।೧।।

ನಾನಾಗುಹೆಗಳ ಪೊಕ್ಕು ತಪವ ಮಾಡಿದರೇನು 
ಮೌನದಿಂದ ಕುರಿತು ಬಲಜಪ ಮಾಡಿದರೇನು
ನಾನಾ ಶಾಸ್ತ್ರವ ಅರ್ಥಮಾಡಿದರೇನು 
ಜಾನಕೀಶನೆ ನಿನ್ನ ದಯವಿಲ್ಲದವರು                               ।।೨।।

ನಾನಾ ಗುಡಿಗಳ ಪೊಕ್ಕು ಪ್ರತಿಮೆ ನೋಡಿದರೇನು 
ನಾನಾ ಸತ್ಯರ ಮುಖವ ನಿತ್ಯ ನೋಡಿದರೇನು 
ಧ್ಯಾನಿಕರಸುಲಭ ಶ್ರೀರಾಮ ನಿನ್ನಡಿಕುಸುಮ 
ಕಾಣದಧಮರು ಈ ಜಗದೊಳಗೆ ಪುಟ್ಟಿ                            ।।೩।।


Labels: ಏನು ಮಾಡಿದರೇನು ಏನು ನೋಡಿದರೇನು. Enu Madidarenu Enu Nodidarenu, ಶ್ರೀರಾಮದಾಸರು, Sriramadasaru

ಗುರುವಾರ, ಜುಲೈ 25, 2013

ಒಕ್ಕಲ ಮಾಡೆನ್ನ ಮುಕುಂದ : Okkala Madenna Mukunda

ಒಕ್ಕಲ ಮಾಡೆನ್ನ ಮುಕುಂದ

ಕೀರ್ತನಕಾರರು : ಶ್ರೀರಾಮದಾಸರು  
ರಾಗ :
ತಾಳ :  

ಒಕ್ಕಲ ಮಾಡೆನ್ನ ಮುಕುಂದ ತಂದೆ 
ಒಕ್ಕಲ ಮಾಡೆನ್ನ                                     ।।ಪ।।

ಒಕ್ಕಲ ಮಾಡೆನ್ನ ದಕ್ಕಿಸಿ ಭವದೊಳು 
ಅಕ್ಕರದಲಿ ನಿಮ್ಮ ಮಿಕ್ಕ ಪ್ರಸಾದ ನೀಡಿ        ।।ಅ.ಪ।।

ಆಸೆ ನೀಗಿಸೆನ್ನಭವದ
ಪಾಶ ತರಿಯೊ ಮುನ್ನ 
ಏಶನೆ ತವ ಪಾದ ದಾಸಾನುದಾಸರ 
ವಾಸದಿರಿಸಿ ಎನ್ನ ಪೋಷಿಸು ದಯದಿಂ          ।।೧।।

ಸೋಕ್ಕು ಮುರಿದು ಎನ್ನ ನಿಮ್ಮಯ 
ಪಕ್ಕದೆಳಕೊ ಎನ್ನ 
ತಿಕ್ಕಿ ಮುಕ್ಕುವ ಘನ ಮಕ್ಕಮಾರಿ ಸತಿಯ 
ರಕ್ಕರ‍್ಹಾರಿಸಿ ನಜರಿಕ್ಕಿ ಸಲಹು ಜೀಯ             ।।೨।।

ಜನನ ಮರಣ ಬಿಡಿಸೊ ಎನ್ನಯ 
ಮಾನವ ನಿನ್ನೊಳಿರಿಸೊ 
ವನರುಹ ಬ್ರಹ್ಮಾಂಡ ಜನನಿ ಜನಕನಾದ 
ವನಜಾಕ್ಷಿಶ್ರೀರಾಮ ಘನಮುಕ್ತಿ ಪಾಲಿಸಿ          ।।೩।।

Labels: ಒಕ್ಕಲ ಮಾಡೆನ್ನ ಮುಕುಂದ, Okkala Madenna Mukunda, ಶ್ರೀರಾಮದಾಸರು, Sriramadasaru