ಹನುಮೇಶ ವಿಠಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹನುಮೇಶ ವಿಠಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 30, 2013

ಕೇಳು ಮೊರೆ ಶಾಂತ ತಾಳು ರಂಗ : Kelu More Shanta Talu Ranga

ಕೇಳು ಮೊರೆ ಶಾಂತ ತಾಳು ರಂಗ 

ಕೀರ್ತನಕಾರರು : ಹನುಮೇಶ ವಿಠಲ
ರಾಗ :  ಬೇಹಾಗ್
 
ತಾಳ : ಅಟ್ಟ 

ಕೇಳು ಮೊರೆ ಶಾಂತ 
ತಾಳು ರಂಗ ನಿನ್ನೊಳು ನಾನಿರುವೆ ಕೃಷ್ಣಾ                              ।।ಪ॥ 

ನಾಳೆಯೆಂದರೆ ತಾಳೋದಾಗೋದು 
ಬಾಳ್ವೆನೆಂದರಿಂದಿಲ್ಲ 
ಆಳೋ ಅರಸನೇ                                                              ।।ಅ.ಪ॥

ಗಾಣ ಎಳೆಯುವ 
ಕ್ವಾಣನಾದೆನೋ 
ಕಾಣವೋ ನಯನ ತ್ರಾಣ ಕಡಿಯಿತು 
ಗೋಣ ನಿನಗೇನಾ ಕಾಣಿಕೆಯನಿತ್ತೆ ವೇಣುಗೋಪಾಲ                 ।।೧।।

ತಾಯಿಯ ಮತಿ ಬೇರೆ 
ಮಾಯಾ ಮಗನಿಗೆ ನಾಯನಾಗಿರುವೆ 
ಗಾಯದ ಮೇಲೆ ನೋಯಿಸುವರಯ್ಯಾ 
ಮಾಯಾ ಬಿಡಿಸಿ ಕಾಯೋ ನರಹರಿ                                        ।।೨।।

ಬೇಡುವರು ಧನ ಕಾಡಿ ಎನ್ನನ್ನು 
ನೋಡೊ ಫಣಿಶಯನಾ ರೂಢಿಯೋಳು ಕುಣಿಸಾಡುತಿಹರಯ್ಯಾ 
ನಾಡಿಗೊಡಯ್ಯಾ 
ಕೈಜೋಡಿಸೆನಯ್ಯ                                                             ।।೩।।

Labels: ಕೇಳು ಮೊರೆ ಶಾಂತ ತಾಳು ರಂಗ, Kelu More Shanta Talu, ಹನುಮೇಶ ವಿಠಲ, Ranga Hanumesha Vithala

ಸೋಮವಾರ, ಆಗಸ್ಟ್ 5, 2013

ಆರು ಪೇಳಿದರೋ ಜೀವಾ : Aru Pelidaro Jiva

ಆರು ಪೇಳಿದರೋ ಜೀವಾ

ಕೀರ್ತನಕಾರರು : ಹನುಮೇಶ ವಿಠಲ
ರಾಗ :  ಭೈರವಿ
ತಾಳ : ಬಿಲಂದಿ 

ಆರು ಪೇಳಿದರೋ ಜೀವಾ 
ನಿನಗಾರು ಪೇಳಿದರೋ                                           ।।ಪ।।

ಆರು ಪೇಳಿದರೋ ಈ ಸೋರುವ ಮನೆಯೊಳು 
ಇರುವುದು ಒಳಿತಲ್ಲಾ ತೆರಳುವದುಚಿತವೇ                  ।।ಅ.ಪ।।

ದುಷ್ಟರಿರುವರೋ 
ಈ ಗೃಹದೊಳು ಕಟ್ಟಿ ಸುಲಿಯುವರೋ 
ಇಟ್ಟಿದ್ದ ಅನ್ನದಿ 
ಕೆಟ್ಟ ಕ್ರಿಮಿಗಳುಂಟು 
ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬದೋ ಅಲ್ಲಿ             ।।೧।।

ಛಾಯವು ಇಲ್ಲಾ 
ಈ ಮನೆಯೊಳು 
ದಾಯವೂ ಇಲ್ಲಾ 
ಬಾಯ ಬಿಡಿಸುವರೋ 
ಅನ್ಯಾಯ ಮಾಡುವರೋ 
ಉಪಾಯದಿಂದಲಿ ಬಿಟ್ಟು
ಹಯವದನ ಸೇರೋ                                              ।।೨।।

ತರುಣರಿರುವರೋ 
ಈ ಮನೆಯೊಳು 
ಮರುಳು ಮಾಡುವರೋ 
ಪರಮ ಪುರುಷ ನಮ್ಮಾ ಹನುಮೇಶ ವಿಠಲನ 
ನೆರೆನಂಬಿ ಸ್ಮರಿಸುವ ಸ್ಥಿರ ಪದವನು ಸೇರೋ               ।।೩।।

Labels: ಆರು ಪೇಳಿದರೋ ಜೀವಾ, Aru Pelidaro Jiva, ಹನುಮೇಶ ವಿಠಲ, Ranga Hanumesha Vithala

ಬುಧವಾರ, ಜುಲೈ 24, 2013

ಕೆಡಬ್ಯಾಡಲೋ ಪ್ರಾಣಿ : Kedabyadalo Prani

ಕೆಡಬ್ಯಾಡಲೋ ಪ್ರಾಣಿ

ಕೀರ್ತನಕಾರರು : ಹನುಮೇಶ ವಿಠಲ
ರಾಗ : ಆನಂದಭೈರವಿ
ತಾಳ : ಬಿಲಂದಿ


ಕೆಡಬ್ಯಾಡಲೋ ಪ್ರಾಣಿ ಕೆಡಬ್ಯಾಡಾ
ನಮ್ಮ ಕಡಲ ಶಯನನ ಭಜನೆ ಬಿಡಬ್ಯಾಡಾ          ।।ಪ।।

ಪರನಿಂದೆ ಮಾಡಿ ಕೆಡಬ್ಯಾಡಾ 
ನನ್ನ ಸರಿ ಯಾರಿಲ್ಲೆಂದು ಮೆರೆಯಬೇಡಾ
ಪರಹಿಂಸಾಮಾಡಿ ನೀ ಕೆಡಬ್ಯಾಡಾ 
ಶ್ರೀ ಹರಿ ಸರ್ವೋತ್ತಮನೆನದೆ ಕೆಡಬ್ಯಾಡಾ            ।।೧।।

ಪರದ್ರವ್ಯವನಪಹರಿಸಲಿ ಬ್ಯಾಡಾ 
ಪರಸತಿಯರ ಮೋಹಕ್ಕೊಳಗಾಗಬ್ಯಾಡಾ 
ದುರಿತ ಕಾರ್ಯಕೆ ಮನ ಕೊಡಬ್ಯಾಡಾ 
ಒಳ್ಳೆ ಪರೋಪಕಾರ ಮಾಡದೇ ಕೆಡಬ್ಯಾಡಾ          ।।೨।।

ಮಾತಾಪಿತರ ಸೇವೆ ಬಿಡಬ್ಯಾಡಾ 
ಯಮದೂತರಂದದಿ ಅವರನು ಕಾಡಬ್ಯಾಡಾ 
ಕೆಟ್ಟ ಮಾರ್ಗವ ಹಿಡಿದು ಹೋಗಬ್ಯಾಡಾ 
ನಿನ್ನ ಸತಿಸುತರಾಮೋಹಕ್ಕೊಳಗಾಗಬ್ಯಾಡಾ    ।।೩।।

Labels: ಕೆಡಬ್ಯಾಡಲೋ ಪ್ರಾಣಿ, Kedabyadalo Prani, ಹನುಮೇಶ ವಿಠಲ, Ranga Hanumesha Vithala