ಗೋಪಾಲ ದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗೋಪಾಲ ದಾಸರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 31, 2013

ಪಾರ್ವತಿ ಪಾಲಿಸೆನ್ನ : Parvati Palisenna

ಪಾರ್ವತಿ ಪಾಲಿಸೆನ್ನ

ಕೀರ್ತನಕಾರರು : 
ಗೋಪಾಲ ದಾಸರು
ರಾಗ : 
ರೇವತಿ
ತಾಳ : ಆದಿ

ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ            ।।ಪ॥

ಪಾರ್ವತಿ ಭಕ್ತರ ಸಾರಥಿ ವಂದಿತೆ
ಸುರಪತಿ ಗಜಮುಖ ಮೂರುತಿ ಮಾತೆ        ।।೧।।


ಮನದಭಿಮಾನಿಯೇ ನೆನೆವೆನು ನಿನ್ನ
ಅನುಸರಿಸೆನ್ನನು ಅಂಬುಜ ಪಾಣಿ               ।।೨।।

ಮಂಗಳೆ ಮೃಡನ ಅಂತರಂಗಳೇ ಹರಿಪದ
ಭೃಂಗಳೆ ತೊಂಗಳೇ ಪನ್ನಗ ವೇಣಿ             ।।೩।।

ಗುಣ ಪೂರ್ಣ ವೇಣು ಗೋಪಾಲ
ವಿಠಲನ್ನ
ಕಾಣಿಸಿ ಕೊಡುವಂತ ಶೂಲಿಯ ರಾಣಿ          ।।೪।।


Labels: ಪಾರ್ವತಿ ಪಾಲಿಸೆನ್ನ, Parvati Palisenna, ಗೋಪಾಲ ದಾಸರು, Gopaladasaru