ಪಾಂಡುರಂಗ ತ್ವತ್ಪಾದ ಪಾಲಿಸಯ್ಯ
ಕೀರ್ತನಕಾರರು : ಶ್ರೀಪತಿ ವಿಠಲದಾಸರು
ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಕರುಣದಿ ಪಿಡಿಕೈಯ್ಯ ||ಪ||
ಪುಂಢರೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ ||ಅ.ಪ||
ವನಜಭವಾದಿ ಸಮಸ್ತ ಸುರವ್ರಾತಾ ವಂದಿತ ಶ್ರೀನಾಥಾ
ಪ್ರಣತಾರ್ಥಾಹರನೆ ಕಾಮಿತಫಲದಾತಾ ಮುನಿಗಣಸಂಧ್ಯಾ ತಾ
ನೆನೆವ ಜನರ ಮನದೊಳಿಹ ವಿಖ್ಯಾತಾ ಭುವನಾದಿನಾಥಾ
ಘನಮಹಿಮ ಒಲಿದು ಪಾಲಿಸೆನ್ನ ಮಾತಾ ದಯಮಾಡಿ ತ್ವರಿತಾ ||೧||
ಸುರಚಿರ ಮಹಿಮನೆ ಭಜಕಾಮರಧೇನೂ ವಸುದೇವರ ಸೂನೂ
ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ ಮಾಡಿದ ಗಂಭೀರಾ
ದೊರೆಯೇ ನಿನ್ಹೊರತನ್ಯರನಾನರಿಯೇ ಕೇಳಲೊ ನರಹರಿಯೇ
ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ ಪೊರೆಯೆಂದು ನುಡಿವೇ ||೨||
ಬಂದ ಜನರ ಭವಸಾಗರ ಪರಿಮಿತಿ ತೋರಿಸುತಿಹ ರೀತೀ
ಚೆಂದದಿಂದ ಕರವಿಟ್ಟು ಕಟಿಗಳಲ್ಲಿ ಈ ಸುಕ್ಷೇತ್ರದಲೀ
ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ
ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ ಅನಾಥ ಬಂಧೋ ||೩||
Labels: ಪಾಂಡುರಂಗ ತ್ವತ್ಪಾದ, Panduranga Tvatpada Palisayya, ಶ್ರೀಪತಿ ವಿಠಲದಾಸರು, Sripati Vithaladasaru