ಹೆಳವನಕಟ್ಟೆ ಗಿರಿಯಮ್ಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹೆಳವನಕಟ್ಟೆ ಗಿರಿಯಮ್ಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 19, 2013

ನಂಬಿದೆ ನಂಬಿದೆ ಅಂಬುಜಾಕ್ಷನೆ : Nambide Nambide Ambujakshane

ನಂಬಿದೆ ನಂಬಿದೆ ಅಂಬುಜಾಕ್ಷನೆ

ಕೀರ್ತನಕಾರರು : ವಿಜಯದಾಸರು      
ರಾಗ :  ಶಂಕರಾಭರಣ   
ತಾಳ : ಆದಿ 

ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ 
ನಂಬಿದ ಭಕ್ತರಿಗೆ ಬೆಂಬಲನಾಗಿರುವನೆ              ।।ಪ।।

ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ 
ಪೊರೆದ ಮಹಾನುಭಾವ ಮುರಹರನೆ ನಿನ್ನ         ।।೧।।

ಶಕ್ತನೆ ನಿನ್ನನಾ ಭಕ್ತಿಯಿಂ ಭಜಿಸುವೆ 
ಭಕ್ತರಿಗೆಲ್ಲ ನೀನು ಮುಕ್ತಿಯ ಕೊಡುವನೆ              ।।೨।।

ಧರೆಯೊಳು ರಾಜಿಪ ವರಹೆಳವನಕಟ್ಟೆ 
ಗಿರಿಯೊಳು ನೆಲಸಿಹ ಪರಮಪುರುಷ ರಂಗ         ।।೩।।

Labels: ನಂಬಿದೆ ನಂಬಿದೆ ಅಂಬುಜಾಕ್ಷನೆ , Nambide Nambide Ambujakshane,  ಹೆಳವನಕಟ್ಟೆ ಗಿರಿಯಮ್ಮ,  Helavanakatte Giriyamma

ಬುಧವಾರ, ಜುಲೈ 24, 2013

ಬಾರನ್ಯಾತಕೆ ನೀರೆ ನೀ ಕರತಾರೆ : Baaranyatake Neere Nee Karatare

ಬಾರನ್ಯಾತಕೆ ನೀರೆ ನೀ 

ಕೀರ್ತನಕಾರರು : ಹೆಳವನಕಟ್ಟೆ ಗಿರಿಯಮ್ಮ 
ರಾಗ : ಮುಖಾರಿ
ತಾಳ : ರೂಪಕ


ಬಾರನ್ಯಾತಕೆ ನೀರೆ ನೀ ಕರತಾರೆ ಸುಗುಣಗಂಭೀರನಾ                       ।।ಪ।।

ಮೂರು ಲೋಕ ಸಂಚಾರ ಕರುಣಾಸಾಗರ ತೇಜಿಯನೇರಿ ಮೆರೆವನಾ        ।।ಅ.ಪ।।

ಕೋಮಲಾಂಗನ ಕಂತುದಹನನು ಸೋಮಾರ್ಕ ಶಿಖಿನೇತ್ರನು 
ವಾಮದೇವನು ವನಜಭವ ಸಂಭವ ಮುನಿಸ್ತೋಮವಿನುತ ಎನ್ನ ಪ್ರೇಮನ   ।।೧।।

ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ 
ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯವನ                      ।।೨।।

ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆಯ 
ರಂಗಗತಿಸಖನಾದ ನೀಲಗಿರಿ ಲಿಂಗಮೂರುತಿಯ                               ।।೩।।

Labels: ಬಾರನ್ಯಾತಕೆ ನೀರೆ ನೀ ಕರತಾರೆ, Baaranyatake Neere Nee Karatare,  ಹೆಳವನಕಟ್ಟೆ ಗಿರಿಯಮ್ಮ,  Helavanakatte Giriyamma

ಮಂಗಳವಾರ, ಜುಲೈ 23, 2013

ಕರೆದಳು ತನ್ನ ಮಗನ ಯಶೋದೆ : Karedalu Tanna Magana

ಕರೆದಳು ತನ್ನ ಮಗನ ಯಶೋದೆ 

ಕೀರ್ತನಕಾರರು : ಹೆಳವನಕಟ್ಟೆ ಗಿರಿಯಮ್ಮ
ರಾಗ : ಮಾಂಜಿ ತಾಳ : ಅಟ್ಟ

ಕರೆದಳು ತನ್ನ ಮಗನ ಯಶೋಧೆ 
ಕರೆದಳು ತನ್ನ ಮಗನ                                         ।।ಪ।।

ಪರಮಪುರುಷ ಹರಿ ಶರಣರ ಸುರತರು 
ತುರು ತುರುಯೆಂಬ ಕೊಳಲನೂದುತ ಬಾರೆಂದು      ।।ಅ.ಪ।।

ಅಂದುಗೆ ಕಿರುಗೆಜ್ಜೆ ಘಲಘಲುಕೆನುತಲಿ 
ಚಂದದಿ ಕುಣಿವ ಮುಕುಂದನೆ ಬಾರೆಂದು                 ।।೧।।

ಹೊನ್ನುಂಗುರುಡಿದಾರ ರನ್ನಕಾಂಚಿಯದಾಮ 
ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು                ।।೨।।

ಸಾಮಗಾನವಿಲೋಲ ಜಾಲವ ಮಾಡದೆ 
ಸ್ವಾಮಿ ಹೆಳವನಕಟ್ಟೆರಂಗ ನೀ ಬಾರೆಂದು                ।।೩।।

Labels: ಕರೆದಳು ತನ್ನ ಮಗನ ಯಶೋದೆ, Karedalu Tanna Magana,  ಹೆಳವನಕಟ್ಟೆ ಗಿರಿಯಮ್ಮ,  Helavanakatte Giriyamma