Kakhandaki Mahipatirayaru ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Kakhandaki Mahipatirayaru ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 31, 2013

ನೀನೆ ಪರಮ ಪಾವನಿ ನಿರಂಜನಿ : Neene Parama Pavani Niranjani

ನೀನೆ ಪರಮ ಪಾವನಿ ನಿರಂಜನಿ                        

ಕೀರ್ತನಕಾರರು : ಕಾಖಂಡಕಿ ಮಹಿಪತಿರಾಯರು 

ನೀನೆ ಪರಮ ಪಾವನಿ ನಿರಂಜನಿ                        ।।ಪ॥

ಆದಿ ನಾರಾಯಣಿ ಸಾಧು ಜನ ವಂದಿನಿ
ಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ           ।।ಅ.ಪ॥

ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿ
ರಕ್ಷ ರಕ್ಷಾತ್ಮಿಣಿ ಅಕ್ಷಯ ಪದ ದಾಯಿನಿ                  ।।೧।।

ಅನಾಥ ರಕ್ಷಿಣಿ ದೀನೋದ್ಧಾರಿಣಿ
ಅನಂತಾನಂತ ಗುಣಿ ಮುನಿಜನ ಭೂಷಣಿ             ।।೨।।

ದಾರಿದ್ರ ಭಂಜನಿ ದುರಿತ ವಿಧ್ವಂಸಿನಿ
ಪರಮ ಸಂಜೀವಿನಿ ಸುರ ಮುನಿ ರಂಜನಿ              ।।೩।।

ಸ್ವಾಮಿ ಶ್ರೀ ಗುರುವಿನಿ ಬ್ರಹ್ಮಾನಂದ ರೂಪಿಣಿ
ಮಹಿಪತಿ ಕುಲ ಸ್ವಾಮಿನಿ ಪರಮ ಪಾವನಿ            ।।೪।।


Labels: ನೀನೆ ಪರಮ ಪಾವನಿ ನಿರಂಜನಿ, Neene Parama Pavani Niranjani, ಕಾಖಂಡಕಿ ಮಹಿಪತಿರಾಯರು, Kakhandaki Mahipatirayaru 

ಮಂಗಳವಾರ, ಆಗಸ್ಟ್ 27, 2013

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ : Krishna Enikyakaiyya Namma Kuda

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ

ಕೀರ್ತನಕಾರರು : ಕಾಖಂಡಕಿ ಮಹಿಪತಿರಾಯರು

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ 
ತುಟಿ ಮಿಸುಕಬಾರದು ನೋಡಬ್ಯಾಡ 
ಗುಟ್ಟು ಒಡೆದ ಮ್ಯಾಲುಳಿಯದು ಗೂಢ 
ಇಷ್ಟರ ಮೇಲೆ ತಿಳಿಯದ ನಾ ಮೂಢ               ।।೧।।

ಅಂದು ಏನಾಗಿತ್ತೈಯ್ಯ ನಿಮ್ಮ ಬುದ್ಧಿ
ಬಂದು ಗೊಲ್ಲರೊಡನೆ ಕೊಡ್ಯಾಕಿದ್ದಿ 
ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ
ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ         ।।೨।।

ಕುಬಜ ಕೂಡಿಕೊಂಬಾಗ ನೋಡಲಿಲ್ಲೆ 
ನಿಜಪದಕ ಯೋಗ್ಯಳ ಮಾಡಲಿಲ್ಲೆ 
ಅಜಮಿಳನೆಷ್ಟೆಂದು ಅರಿಯಲಿಲ್ಲೆ 
ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ                ।।೩।।

ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು 
ನಿಮ್ಮ ಮಾತು ಒಡಿಯದು ಉದ್ದಂಡು 
ಇಮ್ಮನಾಗದಲ್ಹಿಂದ ಮನಗಂಡು 
ಬ್ರಹ್ಮಾನಂದ ಕೊಂಡಾಡುವೆ ಘನನುಂಡು         ।।೪।।

ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ 
ಇಂದು ನಾ ಕೊಡುವದೇನು ಹೇಳಯ್ಯ 
ಕಂಡ ಮಹಿಪತಿ ನಾ ನಿಮ್ಮ ನಿಶ್ಚಯ 
ಎಂದು ಬಿಡದೆ ಸಲಹೊ ನೀ ನಮ್ಮಯ್ಯ            ।।೫।।

Labels: ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ, Krishna Enikyakaiyya Namma Kuda, ಕಾಖಂಡಕಿ ಮಹಿಪತಿರಾಯರು, Kakhandaki Mahipatirayaru

ಸೋಮವಾರ, ಆಗಸ್ಟ್ 5, 2013

ಅರ್ತರಿಯದ್ದ್ಹಾಂಗೆ ಇರಬೇಕು : Artariyaddhange Irabeku

ಅರ್ತರಿಯದ್ದ್ಹಾಂಗೆ ಇರಬೇಕು 

ಕೀರ್ತನಕಾರರು : ಕಾಖಂಡಕಿ ಮಹಿಪತಿರಾಯರು

ಅರ್ತರಿಯದ್ದ್ಹಾಂಗೆ ಇರಬೇಕು ಮರ್ತ್ಯದೊಳಗ                ।।ಪ।।

ಬಲ್ಲೆನೆಂಬ ಬಡಿವಾರ ಸಲ್ಲದು ತಾ ಅಹಂಕಾರ 
ಬಲುಸೂಕ್ಷ್ಮ ಗುರುಪಾರಾವಾರ ತಿಳಿಯಲು ವಿಚಾರ           ।।೧।।

ತರ್ಕಕೆದೋರಲು ಖೂನ ಅರ್ತ್ಯುಳ್ಳವರ ನಿಧಾನ 
ಸರ್ಕನೆ ತಿಳಿವದು ಖೂನ ತಾರ್ಕಣ್ಯ ಧನ                         ।।೨।।

ಹಲವು ಮಾತಾಡಿದಂತೆ ಒಲುವಾಭಾವದೋರಿತು 
ನೆಲೆಯುಗೊಳಬೇಕು ತಿಳುವಂತೆ ಎಲಿಮರಿಕಾಯಮ್ತೆ         ।।೩।।

ಬಲ್ಲತನಕೆ ದೂರ ಸುಲಭ ಸುಜ್ಞಾನ ಸಾರಾ 
ಅಲ್ಲಹುದೇನು ತಾ ವಿಚಾರ ಬಲು ತುಂಬ್ಯಾದ ಸ್ಥಿರ             ।।೪।।

ಅರ್ತು ಅರಿಯದ್ಹಾಂಗಿದ್ದು ಗುರ್ತುಹೇಳದೆ ನೀ ಸದ್ದು 
ಬೆರತು ಮಹಿಪತಿ ನಿಜಹೊಂದು ಅರ್ಥಿ ನಿನಗೊಂದು          ।।೫।।

Labels: ಅರ್ತರಿಯದ್ದ್ಹಾಂಗೆ ಇರಬೇಕು, Artariyaddhange Irabeku, ಕಾಖಂಡಕಿ ಮಹಿಪತಿರಾಯರು, Kakhandaki Mahipatirayaru