ಮಂಗಳವಾರ, ಆಗಸ್ಟ್ 27, 2013

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ : Krishna Enikyakaiyya Namma Kuda

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ

ಕೀರ್ತನಕಾರರು : ಕಾಖಂಡಕಿ ಮಹಿಪತಿರಾಯರು

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ 
ತುಟಿ ಮಿಸುಕಬಾರದು ನೋಡಬ್ಯಾಡ 
ಗುಟ್ಟು ಒಡೆದ ಮ್ಯಾಲುಳಿಯದು ಗೂಢ 
ಇಷ್ಟರ ಮೇಲೆ ತಿಳಿಯದ ನಾ ಮೂಢ               ।।೧।।

ಅಂದು ಏನಾಗಿತ್ತೈಯ್ಯ ನಿಮ್ಮ ಬುದ್ಧಿ
ಬಂದು ಗೊಲ್ಲರೊಡನೆ ಕೊಡ್ಯಾಕಿದ್ದಿ 
ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ
ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ         ।।೨।।

ಕುಬಜ ಕೂಡಿಕೊಂಬಾಗ ನೋಡಲಿಲ್ಲೆ 
ನಿಜಪದಕ ಯೋಗ್ಯಳ ಮಾಡಲಿಲ್ಲೆ 
ಅಜಮಿಳನೆಷ್ಟೆಂದು ಅರಿಯಲಿಲ್ಲೆ 
ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ                ।।೩।।

ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು 
ನಿಮ್ಮ ಮಾತು ಒಡಿಯದು ಉದ್ದಂಡು 
ಇಮ್ಮನಾಗದಲ್ಹಿಂದ ಮನಗಂಡು 
ಬ್ರಹ್ಮಾನಂದ ಕೊಂಡಾಡುವೆ ಘನನುಂಡು         ।।೪।।

ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ 
ಇಂದು ನಾ ಕೊಡುವದೇನು ಹೇಳಯ್ಯ 
ಕಂಡ ಮಹಿಪತಿ ನಾ ನಿಮ್ಮ ನಿಶ್ಚಯ 
ಎಂದು ಬಿಡದೆ ಸಲಹೊ ನೀ ನಮ್ಮಯ್ಯ            ।।೫।।

Labels: ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ, Krishna Enikyakaiyya Namma Kuda, ಕಾಖಂಡಕಿ ಮಹಿಪತಿರಾಯರು, Kakhandaki Mahipatirayaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ