ಆರು ಪೇಳಿದರೋ ಜೀವಾ
ಕೀರ್ತನಕಾರರು : ಹನುಮೇಶ ವಿಠಲ
ರಾಗ : ಭೈರವಿ
ತಾಳ : ಬಿಲಂದಿ
ಆರು ಪೇಳಿದರೋ ಜೀವಾ
ನಿನಗಾರು ಪೇಳಿದರೋ ।।ಪ।।
ಆರು ಪೇಳಿದರೋ ಈ ಸೋರುವ ಮನೆಯೊಳು
ಇರುವುದು ಒಳಿತಲ್ಲಾ ತೆರಳುವದುಚಿತವೇ ।।ಅ.ಪ।।
ದುಷ್ಟರಿರುವರೋ
ಈ ಗೃಹದೊಳು ಕಟ್ಟಿ ಸುಲಿಯುವರೋ
ಇಟ್ಟಿದ್ದ ಅನ್ನದಿ
ಕೆಟ್ಟ ಕ್ರಿಮಿಗಳುಂಟು
ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬದೋ ಅಲ್ಲಿ ।।೧।।
ಛಾಯವು ಇಲ್ಲಾ
ಈ ಮನೆಯೊಳು
ದಾಯವೂ ಇಲ್ಲಾ
ಬಾಯ ಬಿಡಿಸುವರೋ
ಅನ್ಯಾಯ ಮಾಡುವರೋ
ಉಪಾಯದಿಂದಲಿ ಬಿಟ್ಟು
ಹಯವದನ ಸೇರೋ ।।೨।।
ತರುಣರಿರುವರೋ
ಈ ಮನೆಯೊಳು
ಮರುಳು ಮಾಡುವರೋ
ಪರಮ ಪುರುಷ ನಮ್ಮಾ ಹನುಮೇಶ ವಿಠಲನ
ನೆರೆನಂಬಿ ಸ್ಮರಿಸುವ ಸ್ಥಿರ ಪದವನು ಸೇರೋ ।।೩।।
Labels: ಆರು ಪೇಳಿದರೋ ಜೀವಾ, Aru Pelidaro Jiva, ಹನುಮೇಶ ವಿಠಲ, Ranga Hanumesha Vithala
ಕೀರ್ತನಕಾರರು : ಹನುಮೇಶ ವಿಠಲ
ರಾಗ : ಭೈರವಿ
ತಾಳ : ಬಿಲಂದಿ
ಆರು ಪೇಳಿದರೋ ಜೀವಾ
ನಿನಗಾರು ಪೇಳಿದರೋ ।।ಪ।।
ಆರು ಪೇಳಿದರೋ ಈ ಸೋರುವ ಮನೆಯೊಳು
ಇರುವುದು ಒಳಿತಲ್ಲಾ ತೆರಳುವದುಚಿತವೇ ।।ಅ.ಪ।।
ದುಷ್ಟರಿರುವರೋ
ಈ ಗೃಹದೊಳು ಕಟ್ಟಿ ಸುಲಿಯುವರೋ
ಇಟ್ಟಿದ್ದ ಅನ್ನದಿ
ಕೆಟ್ಟ ಕ್ರಿಮಿಗಳುಂಟು
ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬದೋ ಅಲ್ಲಿ ।।೧।।
ಛಾಯವು ಇಲ್ಲಾ
ಈ ಮನೆಯೊಳು
ದಾಯವೂ ಇಲ್ಲಾ
ಬಾಯ ಬಿಡಿಸುವರೋ
ಅನ್ಯಾಯ ಮಾಡುವರೋ
ಉಪಾಯದಿಂದಲಿ ಬಿಟ್ಟು
ಹಯವದನ ಸೇರೋ ।।೨।।
ತರುಣರಿರುವರೋ
ಈ ಮನೆಯೊಳು
ಮರುಳು ಮಾಡುವರೋ
ಪರಮ ಪುರುಷ ನಮ್ಮಾ ಹನುಮೇಶ ವಿಠಲನ
ನೆರೆನಂಬಿ ಸ್ಮರಿಸುವ ಸ್ಥಿರ ಪದವನು ಸೇರೋ ।।೩।।
Labels: ಆರು ಪೇಳಿದರೋ ಜೀವಾ, Aru Pelidaro Jiva, ಹನುಮೇಶ ವಿಠಲ, Ranga Hanumesha Vithala
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ