ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಕೀರ್ತನಕಾರರು : ಪುರಂದರದಾಸರು
ರಾಗ : ಚಾರುಕೇಶಿ
ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಪಾಮರ ಜನರಿಗೆ ಸಾಮಾನ್ಯವಲ್ಲ ।।ಪ॥
ಸಾಮಜ ವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ ।।ಅ.ಪ॥
ಅಂತರ ಮಲಿನವು ಅಳಿಯಬೇಕು
ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ
ನಿರಂತರದಲಿ ತಾ ಚಿಂತಿಸ ಬೇಕು ।।೧।।
ಸರ್ವಾಂತರ್ಯಾಮಿ ಶ್ರೀ ಹರಿಯೆಂದು
ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಪುರಂದರ ವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು ।।೨।।
Labels: ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ, Samanyavalla Sri Hariya Seve, ಪುರಂದರದಾಸರು, Purandaradasaru
ಕೀರ್ತನಕಾರರು : ಪುರಂದರದಾಸರು
ರಾಗ : ಚಾರುಕೇಶಿ
ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಪಾಮರ ಜನರಿಗೆ ಸಾಮಾನ್ಯವಲ್ಲ ।।ಪ॥
ಸಾಮಜ ವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ ।।ಅ.ಪ॥
ಅಂತರ ಮಲಿನವು ಅಳಿಯಬೇಕು
ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ
ನಿರಂತರದಲಿ ತಾ ಚಿಂತಿಸ ಬೇಕು ।।೧।।
ಸರ್ವಾಂತರ್ಯಾಮಿ ಶ್ರೀ ಹರಿಯೆಂದು
ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಪುರಂದರ ವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು ।।೨।।
Labels: ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ, Samanyavalla Sri Hariya Seve, ಪುರಂದರದಾಸರು, Purandaradasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ