ಎಲ್ಲಿದ್ದರೇನು ಶ್ರೀಹರಿಗಲ್ಲದವನು
ಕೀರ್ತನಕಾರರು : ವಿಜಯದಾಸರು
ರಾಗ : ಕಾಂಬೋದಿ
ತಾಳ : ಝಂಪೆ
ಎಲ್ಲಿದ್ದರೇನು ಶ್ರೀಹರಿಗಲ್ಲದವನು ।।ಪ।।
ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ
ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ
ಇಪ್ಪುದೈ ಒಂದು ಅರೆಘಳಿಗೆ ಬಿಡದೆ
ಒಪ್ಪದಿಂದಲಿ ಅದರ ಪರಿಮಳದ ಸೊಬಗನೀ
ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ ।।೧।।
ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು
ಕಾಲವನು ಕಳೆವ ಬಗೆ ಬಲ್ಲಿರೆಲ್ಲ
ವೇಳೆ ವೇಳೆಗೆ ಹಸುವ ಕರೆದುಂಬ ನರನಂತೆ
ಕೀಳು ತೊಣಸಿಯು ಉಂಡು ಹರುಷಪಡಬಲ್ಲುದೆ ।।೨।।
ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ
ಹೊಲಸು ಹೋಗ್ವುದೆ ಹಲವು ಕಾಲಿದ್ದರೆ
ತಿಳಿವಳಿಕೆ ಇಲ್ಲದವ ಸಿರಿ ವಿಜಯವಿಠ್ಠಲನ
ಬಳಿಯಲಿದ್ದರೇನು ದೂರಿದ್ದರೇನು ।।೩।।
Labels: ಎಲ್ಲಿದ್ದರೇನು ಶ್ರೀಹರಿಗಲ್ಲದವನು, Ellidarenu Sriharigalladavanu, ವಿಜಯದಾಸರು, Vijayadasaru
ಕೀರ್ತನಕಾರರು : ವಿಜಯದಾಸರು
ರಾಗ : ಕಾಂಬೋದಿ
ತಾಳ : ಝಂಪೆ
ಎಲ್ಲಿದ್ದರೇನು ಶ್ರೀಹರಿಗಲ್ಲದವನು ।।ಪ।।
ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ
ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ
ಇಪ್ಪುದೈ ಒಂದು ಅರೆಘಳಿಗೆ ಬಿಡದೆ
ಒಪ್ಪದಿಂದಲಿ ಅದರ ಪರಿಮಳದ ಸೊಬಗನೀ
ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ ।।೧।।
ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು
ಕಾಲವನು ಕಳೆವ ಬಗೆ ಬಲ್ಲಿರೆಲ್ಲ
ವೇಳೆ ವೇಳೆಗೆ ಹಸುವ ಕರೆದುಂಬ ನರನಂತೆ
ಕೀಳು ತೊಣಸಿಯು ಉಂಡು ಹರುಷಪಡಬಲ್ಲುದೆ ।।೨।।
ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ
ಹೊಲಸು ಹೋಗ್ವುದೆ ಹಲವು ಕಾಲಿದ್ದರೆ
ತಿಳಿವಳಿಕೆ ಇಲ್ಲದವ ಸಿರಿ ವಿಜಯವಿಠ್ಠಲನ
ಬಳಿಯಲಿದ್ದರೇನು ದೂರಿದ್ದರೇನು ।।೩।।
Labels: ಎಲ್ಲಿದ್ದರೇನು ಶ್ರೀಹರಿಗಲ್ಲದವನು, Ellidarenu Sriharigalladavanu, ವಿಜಯದಾಸರು, Vijayadasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ