ಸೋಮವಾರ, ಆಗಸ್ಟ್ 19, 2013

ಏನು ಧನ್ಯಳೋ ಲಕುಮಿ : Enu Dhanyalo Lakumi

ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ

ಕೀರ್ತನಕಾರರು : ಪುರಂದರದಾಸರು  
ರಾಗ :  ತೋಡಿ  
ತಾಳ : ರೂಪಕ 

ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ                     ।।ಪ।।

ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು           ।।ಅ.ಪ।।

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ 
ಸಾಟಿಯಿಲ್ಲದೆ ಪೂರ್ಣಗುಣಳು ಶ್ರೇಷ್ಠವಾಗಿ ಮಾಡುತಿಹಳು        ।।೧।।

ಛತ್ರ ಚಾಮರ ವ್ಯಜನ ಪರ್ಯಂಕ  ಪಾತ್ರರೂಪದಲ್ಲಿ ನಿಂತು 
ಚಿತ್ರಚರಿತನಾದ ಹರಿಯ ನಿತ್ಯಸೇವೆ ಆಡುತಿಹಳು                   ।।೨।।

ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷರಹಿತನಾದ 
ಗರುಡಗಮನನಾದ ಪುರಂದರವಿಠ್ಠಲನ್ನ ಸೇವಿಸುವಳು             ।।೩।।

Labels: ಏನು ಧನ್ಯಳೋ ಲಕುಮಿ , Enu Dhanyalo Lakumi, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ