ಮಂಗಳವಾರ, ಆಗಸ್ಟ್ 13, 2013

ಈ ಪರಿಯ ಸೊಬಗಾವ ದೇವರಲಿ ಕಾಣೆ : Ee Pariya Sobagaava Devarali Kaane

ಈ ಪರಿಯ ಸೊಬಗಾವ ದೇವರಲಿ ಕಾಣೆ

ಕೀರ್ತನಕಾರರು : ಪುರಂದರದಾಸರು    
ರಾಗ :  ಸಾರಂಗಿ  
ತಾಳ : ಝಂಪೆ

ಈ ಪರಿಯ ಸೊಬಗಾವ ದೇವರಲಿ ಕಾಣೆ                         ।।ಪ।।

ಗೋಪೀಜನಪ್ರಿಯ  ಗೋಪಾಲಗಲ್ಲದೆ                         ।।ಅ.ಪ।।


ದೊರೆಯತನದಲ್ಲಿ ನೋಡೆ ಧರಣಿದೇವಿಗೆ ರಮಣ 
ಸಿರಿಯತನದಲಿ ನೋಡೆ ಶ್ರೀಕಾಂತನು 
ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ 
ಗುರುವುತನದಲಿ ನೋಡೆ ಜಗದಾದಿಗುರುವು                    ।।೧।।

ಪಾವನತ್ವದಿ ನೋಡೆ ಅಮರಗಂಗಾಜನಕ 
ದೇವತ್ವದಲಿ ನೋಡೆ ದಿವಿಜರೊಡೆಯ 
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ 
ಆವಾ ಧೈರ್ಯದಿ ನೋಡೆ ಲೋಕಮೋಹಕನಯ್ಯ               ।।೨।।

ಗಗನದಲಿ ಸಂಚರಿಪ ಗರುಡದೇವನೆ ತುರುಗ 
ಜಗತೀಧರ ಶೇಷ ಪರಿಯಂಕ ಶಯನ 
ನಿಗಮಗೋಚರ ಪುರಂದರವಿಠಲಗಲ್ಲದೆ 
ಮಿಗಿಲಾದ ದೈವಗಳಿಗೀ ಭಾಗ್ಯವುಂಟೆ                              ।।೩।।

Labels: ಈ ಪರಿಯ ಸೊಬಗಾವ ದೇವರಲಿ ಕಾಣೆ, Ee Pariya Sobagaava Devarali Kaane, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ