ಶನಿವಾರ, ಆಗಸ್ಟ್ 31, 2013

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ : Nee Mayeyolago Ninnolu Mayeyo

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ

ಕೀರ್ತನಕಾರರು : ಕನಕದಾಸರು
ರಾಗ :  ಕಾಂಬೋದಿ  
ತಾಳ : ಝಂಪೆ   


ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ                  ।।ಪ॥ 

ನೀ ದೇಹದೊಳಗೊ ನಿನ್ನೊಳು ದೇಹವೊ                          ।।ಅ.ಪ॥ 


ಬಯಲುಲೊಳಗೆ ಆಲಯವೊ ಆಲಯದೊಳಗೆ ಬಯಲೊ 
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯ ಒಳಗೊ ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ                     ।।೧।।


ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ                     ।।೨।।


ಕುಸುಮದಲಿ ಗಂಧವೊ ಗಂಧದಲಿ ಕುಸುಮವೊ
ಕುಸುಮಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ                   ।।೩।।  


Labels: ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ, Nee Mayeyolago Ninnolu Mayeyo, ಕನಕದಾಸರು, Kanakadasaru

1 ಕಾಮೆಂಟ್‌:

  1. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಸಿರಿ ಹರಿ, ಓಳ ಹೂರಗೂ ಸರ್ವತ್ರ ವ್ಯಾಪ್ತ. ಈ ರಹಸ್ಯವನ್ನು ಸಾಕ್ಷಾತ್ ಶ್ರೀ ಯಮಧರ್ಮರಾಯರೇ ಭೂಮಿಯಲ್ಲಿ ಅವತರಿಸಿ, ಶ್ರೀ ಕನಕದಾಸರೆಂದು ಶ್ರೀ ಗುರು ವ್ಯಾಸರಾಜರಿಂದ ಅಂಕಿತಪಡೆದು ಪ್ರಖ್ಯಾತರಾಗಿ, ತಮ್ಮ ಈ ದಿವ್ಯ ದೇವರನಾಮದಲ್ಲಿ ಸುಜನರಿಗೆ ದಯಪಾಲಿಸಿರುತ್ತಾರೆ.

    ಪಠಣ, ಶ್ರವಣ ಸಾಧನ,
    ಸರ್ವದೋಷ ನಿವಾರಣ. ಮಂಗಳವಾಗಲಿ.

    ಎಲ್ಲವೂ ಆ ಅನಿಮಿತ್ತ ಬಂಧುವಿನ,
    ಮಾಯ. ಭಗವಂತನ ಮಾಯೆಯಲ್ಲೇ ಎಲ್ಲವೂ ಅಡಗಿದೆ ಎಂಬ ಭಾವ.

    ಪ್ರತ್ಯುತ್ತರಅಳಿಸಿ