ಗುರುವಾರ, ಆಗಸ್ಟ್ 22, 2013

ಕುಂಟೆ ಹೊಡೆಯೊ ಜಾಣ : Kunte Hodeyo Jana

ಕುಂಟೆ ಹೊಡೆಯೊ ಜಾಣ

ಕೀರ್ತನಕಾರರು : ಶ್ರೀರಾಮದಾಸರು

ಕುಂಟೆ ಹೊಡೆಯೊ ಜಾಣ ಅದನೋಡಿ 
ಕುಂಟೆ ಹರಗೊ ಜಾಣ                                               ।।ಪ॥ 

ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ 
ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನು                     ।।ಅ.ಪ।।

ಅರಿವೆಮಡಿಕೆ ಹೊಡೆಯೊ ಮರವ್ಯೆಂಬ 
ಕರಿಕಿದಡ್ಡನಳಿಯೊ 
ಶರಣೆಂಬಗುದ್ದಲ್ಹಿಡಿಯೊ ಗರುವೆಂಬ 
ದುರಿತಕರಣಗಳಿಗಿಯೊ 
ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ 
ಕರುಣೆಂಬ ಮಾಡಿ ಮಡಿ ಭರದಿ ಹಾಸನ ಮಾಡು             ।।೧।।

ಧ್ಯಾನ ದಾಸರಸೇವೆಯೆಂದೆಂಬುವ 
ಖೂನ ಮಾಡೆಲೊ ಬದುವ 
ದಾನಧರ್ಮಯೆಂಬುವ ಸತತದಿ 
ಹನಿಸುಗೊಬ್ಬರವ 
ಜ್ಞಾನಿಸಂಗವೆಂಬ ಜಾಣ ಬೆದೆಗಾಲದಿ 
ಜ್ಞಾನಕುರಿಗೆಯಿಂದ ಜ್ಞಾನಬೀಜವ ಬಿತ್ತು                         ।।೨।।

ಮನವೆಂಬ ಬೆಳೆ ಕಾಯೊ ನಿಜವಾದ 
ನೆನವೆಂಬ ಕವಣ್ಹಿಡಿಯೊ 
ಮನಚಂಚಲ್ಹಕ್ಕ್ಹೊಡೆಯೊ
ಶಾಂತಿ ಸದ್ಗುಣವೆಂಬ ಫಲ ಪಡೆಯೊ 
ಘನತರ ದೃಢವೆಂಬ ಧಾನ್ಯರಾಸಿ ಮಾಡಿ 
ವನಜಾಕ್ಷ ಶ್ರೀರಾಮನೊನರುಹಕರ್ಪಿಸು                         ।।೩।।

Labels: ಕುಂಟೆ ಹೊಡೆಯೊ ಜಾಣ , Kunte Hodeyo Jana, ಶ್ರೀರಾಮದಾಸರು, Sriramadasaru 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ