ಗುರುವಾರ, ಆಗಸ್ಟ್ 22, 2013

ಕಲ್ಲು ನಾಯೇನೋ : Kallu Nayeno

ಕಲ್ಲು ನಾಯೇನೋ

ಕೀರ್ತನಕಾರರು : ಹರಪನಹಳ್ಳಿ ಭೀಮವ್ವ

ಕಲ್ಲು ನಾಯೇನೋ ಕೈವಲ್ಯದಾಯಕನೆ 
ಕಲ್ಲು  ಕರುಣದಿಂದ್ಹೆಣ್ಣಾಗಿರಲುದ್ಧಾರ ಕೇಳೊ                        ।।ಪ॥ 

ಉಡಬಲ್ಲೆ ಉಣಬಲ್ಲೆ ಉತ್ತಮ ಸಂಗ ಬಿಡಬಲ್ಲೆ 
ನಡೆಯಬಲ್ಲೆನೊ ದುರ್ಮಾರ್ಗದಿಂದ 
ಕಡುಕೋಪದಿಂದ ಕಠಿಣ ಮಾತನಾಡಲು ಬಲ್ಲೆ 
ಕಡಲಶಯನನ್ನ ನಾಮ ನುಡಿಯಲೊಂದರಿಯೆನೊ               ।।೧।।

ಕಾಮಕ್ರೋಧವ ಬಲ್ಲೆ ಮತ್ಸರ ಮದ ಲೋಭ 
ಮೋಹ ಬಲ್ಲೆನೊ ಬಾಂಧವ ಭವದಿ
ಭೇದಬುದ್ಧಿಯ ಬಲ್ಲೆ ಆದಿಮೂರುತಿ ನಿನ್ನ 
ಪದದಿ ಭಕುತಿ ಪರಮಾದರೊಂದರಿಯೆನೊ                        ।।೨।।

ನಿಷ್ಠುರಾಡುತ ಜನರ ನಿಂದಿಸುವುದು ಬಲ್ಲೆ
ಕಷ್ಟಾದಾರಿದ್ರ್ಯ ಒಲ್ಲೆನ್ನ ಬಲ್ಲೆ 
ದುಷ್ಟ ಅಲ್ಪರಿಗೆ ಬಾಯ್ ತೆರೆಯಬಲ್ಲೆ ಭೀಮೇಶ 
ಕೃಷ್ಣ ನಿನದಯ ಬೇದಡಿಕೊಂಬೋದೊಂದರಿಯೆನೊ            ।।೩।।

Labels: ಕಲ್ಲು ನಾಯೇನೋ, Kallu Nayeno,  ಹರಪನಹಳ್ಳಿ ಭೀಮವ್ವನವರು, Harapanahalli Bheemavvanavaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ