ಮಂಗಳವಾರ, ಆಗಸ್ಟ್ 13, 2013

ಭಿಕ್ಷವ್ಯಾತಕೆ ಫಾಲಾಕ್ಷ : Bhikshavyatake Phalaksha

ಭಿಕ್ಷವ್ಯಾತಕೆ ಫಾಲಾಕ್ಷ

ಕೀರ್ತನಕಾರರು : ಮೋಹನದಾಸರು ರಾಗ :  ಕಾಂಬೋದಿ  
ತಾಳ : ಝಂಪೆ

ಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ ಶ್ರೀ 
ಲಕುಮಿಪತಿಯೆಂಬ ಸಖನಿದ್ದ ಬಳಿಕ                        ।।ಪ।। 

ರಜತಾದ್ರಿಯರಮನೆಯು ಹೇಮಗಿರಿಯೇಧನವು 
ಗಜಗಮನ ಸುರನಿಕರ ಪರಿವಾರವು 
ನಿಜರಾಣಿ ಅನ್ನಪೂರ್ಣೆ ಭುಜಗಪತಿ ಭೂಷಣನು
ಗಜಗಮನೆ ಮೊದಲಾದ ಗಂಡು ಮಕ್ಕಳಿರಲು             ।।೧।।

ಬೇಡುವುದು ಬಿಟ್ಟು ನಿನ್ನೆತ್ತು ಯಮನಿಗೆ ತೊಟ್ಟು 
ಮಾಡಬಾರದೆ ಮುಯ್ಯ ಅವನ ಕೋಣ 
ಜೋಡು ಮಾಡಿಕೊಂಡು ಬಾತಿಮುಟ್ಟು ತ್ರಿಶೂಲ 
ಬೇಡಿದ್ದು ಆಗದೆ ಬರಿದೆ ಧಾವತಿಗೊಂಬೆ                    ।।೨।।

ರೊಕ್ಕ ರುಪಾಯಿಗಳ ಇಲ್ಲವೆಂಬೆಯ ಸಾಲ 
ತಕ್ಕೊಬಾರದೆ ಗೆಳೆಯ ಧನಪನಲ್ಲಿ 
ಶುಕ್ರ ಒಕ್ಕಣ್ಣ ಮೋಹನ ವಿಠಲ ಇಕ್ಕಣ್ಣ 
ಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಬಿಡದೆ              ।।೩।।


Labels: ಭಿಕ್ಷವ್ಯಾತಕೆ ಫಾಲಾಕ್ಷ, Bhikshavyatake Phalaksha, ಮೋಹನದಾಸರು, Mohanadasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ