ತೇಲಿಸೋ ಇಲ್ಲ ಮುಳುಗಿಸೋ
ಕೀರ್ತನಕಾರರು : ಪುರಂದರದಾಸರು
ರಾಗ : ಪೂರ್ವಿಕಲ್ಯಾಣಿ
ತಾಳ : ಅಟ್ಟ
ತೇಲಿಸೋ ಇಲ್ಲ ಮುಳುಗಿಸೋ ನಿನ್ನ
ಕಾಲಿಗೆ ಬಿದ್ದೆನೊ ಪರಮ ಕೃಪಾಳೋ ।।ಪ।।
ಸತಿಸುತ ಧನದಾಸೆ ಎಂಬಂತೆ ಮೋಹದಿ
ಹಿತದಿಂದ ಅತಿನೊಂದು ಬೆಂಡಾದೆನೊ
ಗತಿಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ -
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ ।।೧।।
ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ
ಶರಧಿಯೊಳಗೆ ಬಿದ್ದು ಮುಳುಗಿದೆನೊ
ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೊ ಹರಿಯೆ ।।೨।।
ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೋದೆನೋ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸಂಗವಿತ್ತು ಪಾಲಿಸೊ ಹರಿಯೆ ।।೩।।
Labels: ತೇಲಿಸೋ ಇಲ್ಲ ಮುಳುಗಿಸೋ, Teliso Illa Mulugiso, ಪುರಂದರದಾಸರು, Purandaradasaru
ಕೀರ್ತನಕಾರರು : ಪುರಂದರದಾಸರು
ರಾಗ : ಪೂರ್ವಿಕಲ್ಯಾಣಿ
ತಾಳ : ಅಟ್ಟ
ತೇಲಿಸೋ ಇಲ್ಲ ಮುಳುಗಿಸೋ ನಿನ್ನ
ಕಾಲಿಗೆ ಬಿದ್ದೆನೊ ಪರಮ ಕೃಪಾಳೋ ।।ಪ।।
ಸತಿಸುತ ಧನದಾಸೆ ಎಂಬಂತೆ ಮೋಹದಿ
ಹಿತದಿಂದ ಅತಿನೊಂದು ಬೆಂಡಾದೆನೊ
ಗತಿಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ -
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ ।।೧।।
ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ
ಶರಧಿಯೊಳಗೆ ಬಿದ್ದು ಮುಳುಗಿದೆನೊ
ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೊ ಹರಿಯೆ ।।೨।।
ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೋದೆನೋ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸಂಗವಿತ್ತು ಪಾಲಿಸೊ ಹರಿಯೆ ।।೩।।
Labels: ತೇಲಿಸೋ ಇಲ್ಲ ಮುಳುಗಿಸೋ, Teliso Illa Mulugiso, ಪುರಂದರದಾಸರು, Purandaradasaru
Thanks for such a great effort. His bless
ಪ್ರತ್ಯುತ್ತರಅಳಿಸಿ