ಅಸೂಯೆ ಬಿಡಿಸೆನ್ನ ಮನಸಿನ
ಕೀರ್ತನಕಾರರು : ಶ್ರೀರಾಮದಾಸರು
ಅಸೂಯೆ ಬಿಡಿಸೆನ್ನ ಮನಸಿನ
ಅಸೂಯೆ ಬಿಡಿಸೆನ್ನ ।।ಪ॥
ಅಸೂಯೆ ಬಿಡಿಸೆನ್ನ ಹೇಸಿಮನಸಿನ
ಈಶ ನಿನ್ನಪಾದ ದಾಸಾನುದಾಸೆನಿಸೋ ।।ಅ.ಪ॥
ಕೊಟ್ಟರು ಅಷ್ಟೆಯೆನಿಸೋ ಕೊಡದೊದ್ದು
ಅಟ್ಟಿದರಷ್ಟೆನಿಸೋ
ಕೊಟ್ಟು ಕೊಡದವರೆಲ್ಲ ಅಷ್ಟೆನಿಸೆನ್ನಗೆ
ಶಿಷ್ಟಗುಣಿತ್ತು ಪೊರೆ ಸೃಷ್ಟಿಮೇಲೆ ಹರಿ ।।೧।।
ಕಡುಸಿರಿ ಅಷ್ಟೆನಿಸೋ ಎನಗೆ ಬಂದ
ಬಡತನ ಅಷ್ಟೆನಿಸೋ
ಕಡುಸಿರಿ ಬಡತನ ಅಷ್ಟೇಯೆನಿಸಿ ನಿನ್ನ
ಅಡಿದೃಢವಿತ್ತು ಪೊರೆ ಪೊಡವಿ ಮೇಲೆ ಹರಿ ।।೨।।
ದೂಷಣ ಅಷ್ಟೆಯೆನಿಸೋ ಜಗದೊಳು
ಭೂಷಣ ಅಷ್ಟೆನಿಸೋ
ದೂಷಣ ಭೂಷಣ ಅಷ್ಟೇಯೆನಿಸಿ ನಿನ್ನ
ಧ್ಯಾಸಬಿಟ್ಟು ಪೊರೆ ಶ್ರೀಶ ಶ್ರೀರಾಮ ತಂದೆ ।।೩।।
Labels: ಅಸೂಯೆ ಬಿಡಿಸೆನ್ನ ಮನಸಿನ, Asuye Bidisenna Manasina, ಶ್ರೀರಾಮದಾಸರು, Sriramadasaru
ಕೀರ್ತನಕಾರರು : ಶ್ರೀರಾಮದಾಸರು
ಅಸೂಯೆ ಬಿಡಿಸೆನ್ನ ಮನಸಿನ
ಅಸೂಯೆ ಬಿಡಿಸೆನ್ನ ।।ಪ॥
ಅಸೂಯೆ ಬಿಡಿಸೆನ್ನ ಹೇಸಿಮನಸಿನ
ಈಶ ನಿನ್ನಪಾದ ದಾಸಾನುದಾಸೆನಿಸೋ ।।ಅ.ಪ॥
ಕೊಟ್ಟರು ಅಷ್ಟೆಯೆನಿಸೋ ಕೊಡದೊದ್ದು
ಅಟ್ಟಿದರಷ್ಟೆನಿಸೋ
ಕೊಟ್ಟು ಕೊಡದವರೆಲ್ಲ ಅಷ್ಟೆನಿಸೆನ್ನಗೆ
ಶಿಷ್ಟಗುಣಿತ್ತು ಪೊರೆ ಸೃಷ್ಟಿಮೇಲೆ ಹರಿ ।।೧।।
ಕಡುಸಿರಿ ಅಷ್ಟೆನಿಸೋ ಎನಗೆ ಬಂದ
ಬಡತನ ಅಷ್ಟೆನಿಸೋ
ಕಡುಸಿರಿ ಬಡತನ ಅಷ್ಟೇಯೆನಿಸಿ ನಿನ್ನ
ಅಡಿದೃಢವಿತ್ತು ಪೊರೆ ಪೊಡವಿ ಮೇಲೆ ಹರಿ ।।೨।।
ದೂಷಣ ಅಷ್ಟೆಯೆನಿಸೋ ಜಗದೊಳು
ಭೂಷಣ ಅಷ್ಟೆನಿಸೋ
ದೂಷಣ ಭೂಷಣ ಅಷ್ಟೇಯೆನಿಸಿ ನಿನ್ನ
ಧ್ಯಾಸಬಿಟ್ಟು ಪೊರೆ ಶ್ರೀಶ ಶ್ರೀರಾಮ ತಂದೆ ।।೩।।
Labels: ಅಸೂಯೆ ಬಿಡಿಸೆನ್ನ ಮನಸಿನ, Asuye Bidisenna Manasina, ಶ್ರೀರಾಮದಾಸರು, Sriramadasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ