ಮಂಗಳವಾರ, ಆಗಸ್ಟ್ 13, 2013

ಹೊತ್ತು ಹೋಯಿತಲ್ಲಾ : Hottu Hoyitalla

ಹೊತ್ತು ಹೋಯಿತಲ್ಲಾ 

ಕೀರ್ತನಕಾರರು : ಕುಂಟೋಜಿ ನರಸಿಂಹದಾಸರು  

ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ 
ಮತ್ತೆ ಮತ್ತೆ ಉನ್ಮತ್ತರ ಸಂಗದಿ 
ಉತ್ತಮರಿಗೆ ಕರವೆತ್ತಿ ಮುಗಿಯದಲೆ                                 ।।ಪ।।

ನಿತ್ಯ ನಿತ್ಯದಲ್ಲಿ ಪರರ ವಿತ್ತವ ಬಯಸುತಲಿ
ಹತ್ತಿ ಹೊಂದಿದವರೆಂದು ಮೋಹಕ ಬಿದ್ದು 
ಚಿತ್ತಜ ಪಿತನನೇಕ ಚಿತ್ತದಿ ನೆನೆಯದೆ                                ।।೧।।

ಕುಜನರ ಬಳಿವಿಡಿದು ಸುಕರ್ಮವು ಯಜನಾದಿಗಳ ಜರಿದು 
ಭುಜಗಶಯನ ನಿನ್ನ ಭಜನಿಯ ಮಾಡುವ 
ಸುಜನರ ಚರಣಾಂಬುಜವನೆ ಪಿಡಿಯದೆ                             ।।೨।।

ಉದರಭರಣೆಗಾಗಿ ಸರ್ವದಾ ಅಧಮರ ಹಿಂದೆ ತಿರುಗಿ 
ಬುಧರ ಸೇವೆಯು ಮಾಡಿ ಹೃದಯ ಕಮಲದಲ್ಲಿ 
ಪದುಮನಾಭನ ಪಾದ ಮುದದಿ ಧೇನಿಸದೆ                          ।।೩।।

ಜ್ಞಾನವಂತರ ಸಂಗ ಮಂದ ಜ್ಞಾನಿಗೇನೋ ರಂಗ 
ದೀನ ವಾತ್ಸಲ ನೀ ದೀನರಿಗಲ್ಲದಲೇ 
ಹೀನಗುಣದವನಿಗೇನು ಗತಿಯೋ ಕೃಷ್ಣಾ                             ।।೪।।

ಪರಮಪುರುಷ ಹರಿಯೇ ಎನ್ನ ನೀ ಕರಪಿಡಿಯೋ ದೊರಿಯೇ 
ಅರಘಳಿಗ್ಯಾದರೂ ಗುರುಶ್ರೀಶವಿಠ್ಠಲ
ಪರಮ ಪಾವನ ನಿನ್ನ ಚರಣವ ಸ್ಮರಿಸದೆ                             ।।೫।।

Labels: ಹೊತ್ತು ಹೋಯಿತಲ್ಲಾ, Hottu Hoyitalla, ಕುಂಟೋಜಿ ನರಸಿಂಹದಾಸರು, Kuntoji Narasimhadaasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ