ಗುರುವಾರ, ಆಗಸ್ಟ್ 22, 2013

ಬರುವೆಯೋ ರಂಗಯ್ಯ ಮನೆಗೆ : Baruveyo Rangayya Manege

ಬರುವೆಯೋ ರಂಗಯ್ಯ ಮನೆಗೆ 

ಕೀರ್ತನಕಾರರು : ಶ್ರೀದವಿಠಲದಾಸರು  
ರಾಗ :  ನವರೋಜು  
ತಾಳ : ಮಿಶ್ರಛಾಪು 

ಬರುವೆಯೋ ರಂಗಯ್ಯ ಮನೆಗೆ 
ಬಾರೋ ಹೋಗುವ                             ।।ಪ॥ 

ಬುಗರಿ ಚಂಡುಗಳ ಕೊಡುವೆನು ಬಂದರೆ
ಬಗೆ ಬಗೆ ಆಟವ ಕಲಿಸಿ ಒಲಿಸುವೆನು        ।।೧।।

ರಸ ರಸಾಯನಗಳುಣ್ಣಿಸುವೆ ಬಂದರೆ 
ಮುಸುಕಿನೊಳಗೆ ಬಚ್ಚಿಟ್ಟುಕೊಂಬುವೆನು    ।।೨।।

ಶ್ರೀದವಿಠ್ಠಲ ಬಂದರೆ ನಿನಗೆ 
ಸಾದರದಲಿ ಸವಿಮಾತನ್ಹೇಳುವೆನು          ।।೩।।

Labels: ಬರುವೆಯೋ ರಂಗಯ್ಯ ಮನೆಗೆ, Baruveyo Rangayya Manege, ಶ್ರೀದವಿಠಲದಾಸರು, Sridavithaladasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ