ಮಂಗಳವಾರ, ಆಗಸ್ಟ್ 13, 2013

ಎದ್ದು ಬರುತಾರೆ ನೋಡೆ : Eddu Barutare Node

ಎದ್ದು ಬರುತಾರೆ ನೋಡೆ

ಕೀರ್ತನಕಾರರು : ಗುರುಜಗನ್ನಾಥ ವಿಠಲರು
ರಾಗ :  ಕಾಂಬೋದಿ  
ತಾಳ : ಝಂಪೆ

ಎದ್ದು ಬರುತಾರೆ ನೋಡೆ ತಾ 
ವೆದ್ದು ಬರುತಾರೆ ನೋಡೆ                                      ।।ಪ।।

ಮುದ್ದು ಬೃಂದಾವನ ಮಧ್ಯದೊಳಗಿಂದ 
ತಿದ್ದಿ ಹಚ್ಚಿದ ನಾಮಮುದ್ರೆಗಳೊಪ್ಪುತಿವೆ                  ।।ಅ.ಪ।।

ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು 
ಚೆಲುವ  ಮುಖದೊಳು ಪೊಳೆವ ದಂತಗಳಿಂದ          ।।೧।।

ಹೃದಯಸದನದಲ್ಲಿ ಪದುಮನಾಭನ ಭಜಿಸಿ 
ಮುದಮನದಿಂದ ನಿತ್ಯಪದಕಮಲರೂಪ ತಾಳಿ          ।।೨।।

ದಾತಗುರುಜಗನ್ನಾಥ ವಿಠಲನ 
ಪ್ರೀತಿಯ ಪಡಿಸುತ ದೂತರಪೊರೆಯುತ                  ।।೩।।


Labels: ಎದ್ದು ಬರುತಾರೆ ನೋಡೆ, Eddu Barutare Node, ಗುರುಜಗನ್ನಾಥ ವಿಠಲರು, Guru Jagannatha Vithalaru

1 ಕಾಮೆಂಟ್‌: