ಮಂಗಳವಾರ, ಆಗಸ್ಟ್ 13, 2013

ಬೈಯಿರೋ ಬೈಯಿರೋ : Baiyiro Baiyiro

ಬೈಯಿರೋ ಬೈಯಿರೋ

ಕೀರ್ತನಕಾರರು : ಪುರಂದರದಾಸರು  
ರಾಗ :  ಕಾಪಿ   
ತಾಳ : ಏಕ 

ಬೈಯಿರೋ ಬೈಯಿರೋ 
ಮನಮುಟ್ಟಿ ಬೈಯಿರೋ                       ।।ಪ।।

ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೊ       ।।ಅ.ಪ।।

ಅವರು ಇವರು ಬೈವರೆಂಬೊ 
ಹೀನಬುದ್ಧಿ ನನಗಿಲ್ಲ 
ನಾ ಮಾಡಿದಷ್ಟು ಪಾಪವನ್ನು 
ಅಳೆದುಹಾಕಿ ಹಂಚಿಕೊಳ್ಳಿರೋ               ।।೧।।

ಇರುವೆ ನೊಣ ಕೊಂದ ಪಾಪ 
ಪರನಿಂದೆ ಮಾಡಿದ ಪಾಪ 
ಹೊಲೆಯ ಪಾಪ ಕೆಲವು ಉಂಟು 
ಅಳೆದು ಹಾಕಿ ಹಂಚಿಕೊಳ್ಳಿರೋ               ।।೨।।

ಅತ್ತೆ ಮಾವನ ಬೈದ ಪಾಪ 
ಮತ್ತೆ ಹಿರಿಯರ ಜಾರಿದ ಪಾಪ 
ಕರ್ತ ಶ್ರೀ ಪುರಂದರವಿಠಲನ್ನ 
ಚಿತ್ತದಲ್ಲಿ ನೆನೆಯದ ಪಾಪ                       ।।೩।।

Labels: ಬೈಯಿರೋ ಬೈಯಿರೋ, Baiyiro Baiyiro, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ