ಸೋಮವಾರ, ಆಗಸ್ಟ್ 5, 2013

ವಿಠಲ ಓಡಿ ಬಾರೊ : Vithala Odi Baro

ವಿಠಲ ಓಡಿ ಬಾರೊ

ಕೀರ್ತನಕಾರರು : ತುಪಾಕಿ ವೆಂಕಟರಮಣಾಚಾರ್ಯರು

ವಿಠಲ ಓಡಿ ಬಾರೊ ತೊಟ್ಟಿಲನೇರೊ 
ಪುಟ್ಟ ಕಮಲದಂಥ ಬಟ್ಟ ಮುಖವ ತೋರೊ              ।।ಪ।।

ಜಟ್ಟಿಯಂದದಿ ಭುಜ ತಟ್ಟಿ ಹುಂಕರಿಸುತ ಅ-
ರಿಷ್ಟ ವೃಷಭನನ್ನು ಮೆಟ್ಟಿ ಮಡುಹಿದಂಥ                   ।।೧।।

ಹೇಷಿಕ ಭೀಷಣ ಕೇಶಿಯಂಬಸುರನ 
ಘಾಸಿಮಾಡಿದ ತೋಳ ಬೀಸುತ ಭರದಿಂದ              ।।೨।।

ಮಂದಹಾಸದಿ ಶರದಿಂದುಕಾಂತಿಯ ಗೆಲ್ವ 
ಸುಂದರ ಮುಖ ಪೂರ್ಣಾನಂದ ಗೋಪಿಯ ತಂದ      ।।೩।।

ಮೀಸಲ ನೊರೆಹಾಲು ಕಾಸಿ ಸಕ್ಕರೆ ಕೂಡಿ 
ವಾಸ ಚೂರ್ಣವನಿಕ್ಕಿ ಶ್ರೀಶನಿನ್ನೊಶಕೀವೆ                 ।।೪।।

ನಿತ್ಯ ಸುಖಾಂಬುಧೆ ನಿರವಧಿ ಫಲದ ಸ 
ರ್ವೋತ್ತಮ ಶೇಷಾದ್ರಿ ಶಿಖರೀಶ ಶ್ರೀನಿವಾಸ             ।।೫।।

Labels: ವಿಠಲ ಓಡಿ ಬಾರೊ, Vithala Odi Baro, ತುಪಾಕಿ ವೆಂಕಟರಮಣಾಚಾರ್ಯರು, Tupaki Venkataramanacharyaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ