ಏಕೆ ಮಲಗಿಹೆ ಹರಿಯೆ
ಕೀರ್ತನಕಾರರು : ಗೋಪಾಲದಾಸರು
ರಾಗ : ಬಿಳಹರಿ
ತಾಳ : ಝಂಪೆ
ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।।
ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಾಯ್ತೊ
ಅಮರರಿಪುವನು ಸೀಳೆ ಕರ ಸೋತಿತೊ ।।೧।।
ಆಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ ।।೨।।
ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ
ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ ।।೩।।
Labels: ಏಕೆ ಮಲಗಿಹೆ ಹರಿಯೆ, Eke Malagihe Hariye, ಗೋಪಾಲ ದಾಸರು, Gopaladasaru
ಕೀರ್ತನಕಾರರು : ಗೋಪಾಲದಾಸರು
ರಾಗ : ಬಿಳಹರಿ
ತಾಳ : ಝಂಪೆ
ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।।
ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಾಯ್ತೊ
ಅಮರರಿಪುವನು ಸೀಳೆ ಕರ ಸೋತಿತೊ ।।೧।।
ಆಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ ।।೨।।
ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ
ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ ।।೩।।
Labels: ಏಕೆ ಮಲಗಿಹೆ ಹರಿಯೆ, Eke Malagihe Hariye, ಗೋಪಾಲ ದಾಸರು, Gopaladasaru
ಕಾಕು ನೃಪರು = ದುಷ್ಟ ರಾಜರು. ಇಲ್ಲಿ ದಾಸರು ಪರಶುರಾಮನನ್ನು ಉಲ್ಲೇಖಿಸುತ್ತಿದ್ದಾರೆ
ಪ್ರತ್ಯುತ್ತರಅಳಿಸಿರಿಪು = ವೈರಿ . ಅಮರ ರಿಪು = ಹಿರಣ್ಯಕಷಪು
ಪ್ರತ್ಯುತ್ತರಅಳಿಸಿ