ಏನು ಮಾಡಿದರೇನು ಏನು ನೋಡಿದರೇನು
ಕೀರ್ತನಕಾರರು : ಶ್ರೀರಾಮದಾಸರು
ಏನು ಮಾಡಿದರೇನು ಏನು ನೋಡಿದರೇನು
ದಾನವಾಂತಕ ನಿನ್ನನರಿಯದ ಪಾಪಿ ।।ಪ॥
ನಾನಾ ದೇಶವ ತಿರುಗಿ ಯಾತ್ರೆ ಮಾಡಿದರೇನು
ನಾನಾ ತೀರ್ಥವ ಮುಳುಗಿ ಸ್ನಾನ ಮಾಡಿದರೇನು
ನಾನಾ ಕ್ಷೇತ್ರದಿ ನಿಂದು ದಾನವ ಮಾಡಿದರೇನು
ದೀನರಕ್ಷಕ ನಿನ್ನ ಒಲುಮಿಲ್ಲದವರು ।।೧।।
ನಾನಾಗುಹೆಗಳ ಪೊಕ್ಕು ತಪವ ಮಾಡಿದರೇನು
ಮೌನದಿಂದ ಕುರಿತು ಬಲಜಪ ಮಾಡಿದರೇನು
ನಾನಾ ಶಾಸ್ತ್ರವ ಅರ್ಥಮಾಡಿದರೇನು
ಜಾನಕೀಶನೆ ನಿನ್ನ ದಯವಿಲ್ಲದವರು ।।೨।।
ನಾನಾ ಗುಡಿಗಳ ಪೊಕ್ಕು ಪ್ರತಿಮೆ ನೋಡಿದರೇನು
ನಾನಾ ಸತ್ಯರ ಮುಖವ ನಿತ್ಯ ನೋಡಿದರೇನು
ಧ್ಯಾನಿಕರಸುಲಭ ಶ್ರೀರಾಮ ನಿನ್ನಡಿಕುಸುಮ
ಕಾಣದಧಮರು ಈ ಜಗದೊಳಗೆ ಪುಟ್ಟಿ ।।೩।।
Labels: ಏನು ಮಾಡಿದರೇನು ಏನು ನೋಡಿದರೇನು. Enu Madidarenu Enu Nodidarenu, ಶ್ರೀರಾಮದಾಸರು, Sriramadasaru
ಕೀರ್ತನಕಾರರು : ಶ್ರೀರಾಮದಾಸರು
ಏನು ಮಾಡಿದರೇನು ಏನು ನೋಡಿದರೇನು
ದಾನವಾಂತಕ ನಿನ್ನನರಿಯದ ಪಾಪಿ ।।ಪ॥
ನಾನಾ ದೇಶವ ತಿರುಗಿ ಯಾತ್ರೆ ಮಾಡಿದರೇನು
ನಾನಾ ತೀರ್ಥವ ಮುಳುಗಿ ಸ್ನಾನ ಮಾಡಿದರೇನು
ನಾನಾ ಕ್ಷೇತ್ರದಿ ನಿಂದು ದಾನವ ಮಾಡಿದರೇನು
ದೀನರಕ್ಷಕ ನಿನ್ನ ಒಲುಮಿಲ್ಲದವರು ।।೧।।
ನಾನಾಗುಹೆಗಳ ಪೊಕ್ಕು ತಪವ ಮಾಡಿದರೇನು
ಮೌನದಿಂದ ಕುರಿತು ಬಲಜಪ ಮಾಡಿದರೇನು
ನಾನಾ ಶಾಸ್ತ್ರವ ಅರ್ಥಮಾಡಿದರೇನು
ಜಾನಕೀಶನೆ ನಿನ್ನ ದಯವಿಲ್ಲದವರು ।।೨।।
ನಾನಾ ಗುಡಿಗಳ ಪೊಕ್ಕು ಪ್ರತಿಮೆ ನೋಡಿದರೇನು
ನಾನಾ ಸತ್ಯರ ಮುಖವ ನಿತ್ಯ ನೋಡಿದರೇನು
ಧ್ಯಾನಿಕರಸುಲಭ ಶ್ರೀರಾಮ ನಿನ್ನಡಿಕುಸುಮ
ಕಾಣದಧಮರು ಈ ಜಗದೊಳಗೆ ಪುಟ್ಟಿ ।।೩।।
Labels: ಏನು ಮಾಡಿದರೇನು ಏನು ನೋಡಿದರೇನು. Enu Madidarenu Enu Nodidarenu, ಶ್ರೀರಾಮದಾಸರು, Sriramadasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ