ಶುಕ್ರವಾರ, ಆಗಸ್ಟ್ 23, 2013

ಇಂಥಾ ಹೆಣ್ಣಿನ ನಾನೆಲ್ಲಿ ಕಾಣೆನು : Intha Hennina Nanelli Kanenu

ಇಂಥಾ ಹೆಣ್ಣಿನ ನಾನೆಲ್ಲಿ ಕಾಣೆನು

ಕೀರ್ತನಕಾರರು : ಪುರಂದರದಾಸರು    
ರಾಗ :  ಭೈರವಿ  
ತಾಳ : ಅಟ್ಟ

ಇಂಥಾ ಹೆಣ್ಣಿನ ನಾನೆಲ್ಲಿ ಕಾಣೆನು ಹೊಂತಕಾರಿ ಕಾಣಿರೊ           ।।ಪ॥ 

ಸಂತತ ಸುರರಿಗೆ ಪೀಯೂಷ ಉಣಿಸಿದ 
ಪಂಕ್ತಿಯೊಳಗೆ ಪರವಂಚನೆ ಮಾಡಿದ                                     ।।ಅ.ಪ॥ 

ಮಂದರಗಿರಿ ತಂದು ಸಿಂಧುವಿನೊಳಗಿಟ್ಟು 
ಚಂದದಿ ಕಡೆದು ಅಮೃತವ ತೆಗೆದು 
ಇಂದುಮುಖಿ ನೀ ಬಡಿಸೆಂದು ಕೊಟ್ಟರೆ 
ದಂಧನಗಳ ಮಾಡಿ ದೈತ್ಯರ ವಂಚಿಸಿದ                                  ।।೧।।

ವಿಶ್ವಾಸದಿಂದಲಿ ಅಸುರಗೆ ವರವಿತ್ತು 
ತ್ರಿಶೂಲಧರ ಓಡಿ ಬಳಲುತಿರೆ 
ನಸುನಗುತಲಿ ಬಂದು ಭಸ್ಮಾಸುರನಿಗೆ 
ಭೋಗದಾಸೆಯ ತೋರಿ ಭಸ್ಮವ ಮಾಡಿದ                              ।।೨।।

ವಸುಧೆಯೊಳು ಹೆಣ್ಣು ಒಸಗೆಯಾಗದ ಮುನ್ನ 
ಬಸಿರಲಿ ಬ್ರಹ್ಮನ ಪಡೆದವಳಿವಳು 
ಕುಸುಮನಾಭ ಶ್ರೀ ಪುರಂದರವಿಠಲ 
ಪೆಸರು ಪೊತ್ತಿಹಳು ಈ ಪೊಸ ಕನ್ನಿಕೆಯು                                 ।।೩।।

Labels: ಇಂಥಾ ಹೆಣ್ಣಿನ ನಾನೆಲ್ಲಿ ಕಾಣೆನು, Intha Hennina Nanelli Kanenu, ಪುರಂದರದಾಸರು, Purandaradasaru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ