ಮಂಗಳವಾರ, ಆಗಸ್ಟ್ 13, 2013

ಬಂದನೇನೆ ರಂಗ ಬಂದನೇನೆ : Bandanene Ranga Bandanene

ಬಂದನೇನೆ ರಂಗ ಬಂದನೇನೆ 

ಕೀರ್ತನಕಾರರು : ಪುರಂದರದಾಸರು   
ರಾಗ :  ಶ್ರೀ 
ತಾಳ : ಆದಿ 

ಬಂದನೇನೆ ರಂಗ ಬಂದನೇನೆ                                   ।।ಪ।।
ಎನ್ನ ತಂದೆ ಬಾಲಕೃಷ್ಣ ನವನೀತಚೋರ                      ।।ಅ.ಪ।।

ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆ 
ಹೊಳೆಹೊಳೆಯುವ ಪಾದವನೂರುತ 
ನಲಿನಲಿದಾಡುವ ಉಂಗುರ ಅರಳೆಲೆ 
ಥಳಥಳಥಳ ಹೊಳೆಯುತ ಶ್ರೀಕೃಷ್ಣ                              ।।೧।।

ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆ 
ಝಣಝಣಝಣರೆಂಬ ನಡುವಿನ ಗಂಟೆ 
ಧಣಧಣಧಣರೆಂಬ ಪಾದದ ತೊಡವಿನ  
ಮಿಣಿಮಿಣಿ ಕುಣಿದಾಡುತ ಶ್ರೀಕೃಷ್ಣ                                 ।।೨।।

ಹಿಡಿಹಿಡಿ ಹಿಡಿಯೆಂದು ಪುರಂದರವಿಠಲನ 
ದುಡುದುಡುದುಡು ದುಡನೇ ಓಡುತ 
ನಡೆನಡೆ ನಡೆಯೆಂದು ಮೆಲ್ಲನೆ ಪಿಡಿಯಲು 
ಬಿಡಿಬಿಡಿಬಿಡಿ ದಮ್ಮಯ್ಯ ಎನ್ನುತ                                   ।।೩।।

Labels: ಬಂದನೇನೆ ರಂಗ ಬಂದನೇನೆ, Bandanene  Ranga Bandanene, ಪುರಂದರದಾಸರು, Purandaradasaru

1 ಕಾಮೆಂಟ್‌: