ಯಾಕೆ ಬಂದೆಯೊ ಎಲೆ ಜೀವ
ಕೀರ್ತನಕಾರರು : ವಿಜಯದಾಸರು
ರಾಗ : ಸಿಂಧುಭೈರವಿ
ತಾಳ : ಆದಿ
ಯಾಕೆ ಬಂದೆಯೊ ಎಲೆ ಜೀವ ನೀ- ।।ಪ॥
ನ್ಯಾಕೆ ಬಂದೆಯೋ ಎಲೆ ಜೀವ ಈ
ಲೋಕದ ಅನುಭವ ಬೇಕಾಯ್ತೆ ನಿನಗೆ ।।ಅ.ಪ॥
ಮೇರು ಪರ್ವತದಲ್ಲಿ ವಾರಣವಂತನಾಗಿ
ಮಾರಮಣನ ಪಾದ ಭಜನೆಯ ಬಿಟ್ಟು ನೀ ।।೧।।
ಹೊನ್ನು ಹೆಣ್ಣ ಮಣ್ಣು ಮೂರು ತನ್ನದಾದೀತೆಂದು
ಬಣ್ಣ ಸುಖವ ನಂಬಿ ಬಂದೆಯಾ ಜೀವ ।।೨।।
ಆದದ್ದೆಲ್ಲಾಯಿತು ಹೋದ ಮಾತುಗಳ್ಯಾಕೆ
ಶ್ರೀದ ವಿಜಯವಿಠಲನ ನೆನೆಕಂಡ್ಯ ಮನವೇ ।।೩।।
Labels: ಯಾಕೆ ಬಂದೆಯೊ ಎಲೆ ಜೀವ, Yake Bandeyo Ele Jiva, ವಿಜಯದಾಸರು, Vijayadasaru
ಕೀರ್ತನಕಾರರು : ವಿಜಯದಾಸರು
ರಾಗ : ಸಿಂಧುಭೈರವಿ
ತಾಳ : ಆದಿ
ಯಾಕೆ ಬಂದೆಯೊ ಎಲೆ ಜೀವ ನೀ- ।।ಪ॥
ನ್ಯಾಕೆ ಬಂದೆಯೋ ಎಲೆ ಜೀವ ಈ
ಲೋಕದ ಅನುಭವ ಬೇಕಾಯ್ತೆ ನಿನಗೆ ।।ಅ.ಪ॥
ಮೇರು ಪರ್ವತದಲ್ಲಿ ವಾರಣವಂತನಾಗಿ
ಮಾರಮಣನ ಪಾದ ಭಜನೆಯ ಬಿಟ್ಟು ನೀ ।।೧।।
ಹೊನ್ನು ಹೆಣ್ಣ ಮಣ್ಣು ಮೂರು ತನ್ನದಾದೀತೆಂದು
ಬಣ್ಣ ಸುಖವ ನಂಬಿ ಬಂದೆಯಾ ಜೀವ ।।೨।।
ಆದದ್ದೆಲ್ಲಾಯಿತು ಹೋದ ಮಾತುಗಳ್ಯಾಕೆ
ಶ್ರೀದ ವಿಜಯವಿಠಲನ ನೆನೆಕಂಡ್ಯ ಮನವೇ ।।೩।।
Labels: ಯಾಕೆ ಬಂದೆಯೊ ಎಲೆ ಜೀವ, Yake Bandeyo Ele Jiva, ವಿಜಯದಾಸರು, Vijayadasaru
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ